ಕಾಂಗ್ರೆಸ್ ಸಂಸದ 42 ವರ್ಷದ ಬಾಲಾ ಧನೋರ್ಕರ್ ನಿಧನರಾಗಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಚಂದ್ರಾಪುರ್ ಲೋಕಸಭಾ ಕ್ಷೇತ್ರವನ್ನು ಇವರು ಪ್ರತಿನಿಧಿಸುತ್ತಿದ್ದರು
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ ದೆಹಲಿಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಿಂದ ಆಯ್ಕೆ ಆಗಿದ್ದ ಏಕೈಕ ಕಾಂಗ್ರೆಸ್ ಸಂಸದ ಇವರಾಗಿದ್ದರು.
ಶನಿವಾರವಷ್ಟೇ ಇವರ ತಂದೆ 80 ವರ್ಷದ ನಾರಾಯಣ್ ಧನೋರ್ಕರ್ ಅವರು ನಿಧನರಾಗಿದ್ದರು. ದೆಹಲಿಯಲ್ಲಿ ಚಿಕಿತ್ಸೆ ಪಡೀತಿದ್ದ ಕಾರಣ ಬಾಲಾ ಅವರಿಗೆ ಭಾನುವಾರ ನಡೆದಿದ್ದ ತಮ್ಮ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ.
ಬಾಲಾ ಧನೋರ್ಕರ್ ಅವರ ಪತ್ನಿ ಪ್ರತಿಭಾ ಶಾಸಕಿಯಾಗಿದ್ದು, ಇಬ್ಬರು ಪುತ್ರರಿದ್ದಾರೆ.
ADVERTISEMENT
ADVERTISEMENT