ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಬ್ಯಾಂಕುಗಳಿಂದ ಸಾಲ ನೀಡುವ ಸಲುವಾಗಿ ಇಲಾಖೆಯ ವತಿಯಿಂದ ಬ್ಯಾಂಕುಗಳಿಗೆ ವಸೂಲಿ ಜವಾಬ್ದಾರಿ ಪತ್ರ ನೀಡುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಷೆಡ್ಯೂಲ್ಡ್ ಬ್ಯಾಂಕುಗಳಿಂದ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಸಾಲ ಪಡೆದು ನಂತರ ಸಾಲ ಮತ್ತು ಬಡ್ಡಿ ಸಕಾಲದಲ್ಲಿ ಬ್ಯಾಂಕಿಗೆ ಪಾವತಿ ಮಾಡುತ್ತಿಲ್ಲ.
ನೌಕರರು ವರ್ಗಾವಣೆಯಾಗುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪೇಚಿಕೆ ಸಿಲುಕುತ್ತಿದೆ. ಕಚೇರಿಗೆ ದೂರುಗಳು ಬರುತ್ತಿದ್ದು, ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ.
ಸರ್ಕಾರಿ ನೌಕರರು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಅನಗತ್ಯ ಸಾಲದ ಸುಳಿಯಲ್ಲಿ ಸಿಲುಕಬಾರದು. ಹೀಗಾಗಿ ಇನ್ನುಂದೆ ಬಟವಾಡೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಬೋಧಕ ಬೋಧಕೇತರ ಸಿಬ್ಬಂದಿಗೆ ಸಾಲ ಪಡೆಯಲು ಬ್ಯಾಂಕಿನವರಿಗೆ ಒಪ್ಪಿಗೆ ಪತ್ರವನ್ನು ನೀಡಬಾರದು ಸೂಚಿಸಿದೆ. ಒಂದು ವೇಳೆ ನೌಕರರು ಮನವಿ ಮಾಡಿದ್ದಲ್ಲಿ ವೇತನ ದೃಢೀಕರಣ ಪತ್ರವನ್ನು ನೀಡಬಹುದು. ಸಾಲ ವಸೂಲಿ ಮಾಡುವ ಜವಾಬ್ದಾರಿ ಬ್ಯಾಂಕಿನದ್ದು, ಇಲಾಖೆಯದ್ದಲ್ಲ
ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ADVERTISEMENT
ADVERTISEMENT