ಬೆಂಗಳೂರು ಪ್ರವಾಹ: 15 ಕಡೆಗಳಲ್ಲಿ ದೊಡ್ಡ ಸಂಸ್ಥೆಗಳಿಂದ ರಾಜಕಾಲುವೆ ಒತ್ತುವರಿ

ಬೆಂಗಳೂರು (Bangalore) ನಗರದ ಮಹದೇವಪುರ (Mahadevpura) ವಯಲದಲ್ಲಿ ರಾಜಕಾಲುವೆ (Rajakaluve)ಯನ್ನು ಒತ್ತುವರಿ ಮಾಡಿಕೊಂಡಿದ್ದರ ಬಗ್ಗೆ ಕಳೆದ ತಿಂಗಳು ಅಂದರೆ ಆಗಸ್ಟ್​ 17ರಂದೇ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತರಿಗೆ ವರದಿ ಸಲ್ಲಿಕೆ ಆಗಿತ್ತು.
ಮಹದೇವಪುರ ವಲಯ ಆಯುಕ್ತರು ನೀಡಿದ್ದ ಆದೇಶದ ಮೇರೆಗೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ 11 ಟೆಕ್​ಪಾರ್ಕ್​ಗಳು ಮತ್ತು ಡೆವಲಪರ್ಸ್​​ ಬಗ್ಗೆ ವರದಿ ಸಲ್ಲಿಕೆ ಆಗಿತ್ತು.
ಈ ಭಾಗದಲ್ಲಿ ಮಳೆ ನೀರು ನಿಂತು ಅಧ್ವಾನ ಆದ ಬಳಿಕ ನಿನ್ನೆಯಿಂದ ಬಿಬಿಎಂಪಿ ತೆರವು ಕಾರ್ಯಾಚರಣೆ ಆರಂಭಿಸಿತ್ತು.
1. ಬೆಂಗಳೂರು ಟೆಕ್​ ಪಾರ್ಕ್​, ಪೂರ್ವ ಪ್ಯಾರೈಡಸ್​ – ಮಹದೇವಪುರ
2. ಆರ್​ಬಿಡಿ – ಹಾಲನಾಯಕನಹಳ್ಳಿ, ಜ್ಞಾನಸಂದ್ರ, ದೊಡ್ಡಕನ್ನಹಳ್ಳಿ
3. ವಿಪ್ರೋ – ದೊಡ್ಡಕನ್ನಹಳ್ಳಿ
4. ಎಕೋ ಸ್ಪೇಸ್​ – ಬೆಳ್ಳಂದೂರು
5. ಗೋಪಾಲನ್​ – ಬೆಳ್ಳಂದೂರು
6. ಗೋಪಾಲನ್​ – ಹೂಡಿ
7. ದಿವ್ಯಾ ಸ್ಕೂಲ್​ ಮತ್ತು ಇತರರು – ಹೂಡಿ
8. ಗೋಪಾಲನ್​ ಮತ್ತು ಇತರರು – ಹೂಡಿ, ಸೊನ್ನೆಹಳ್ಳಿ
9. ಆದರ್ಶ – ಆರ್​ ನಾರಾಯಣಪುರ
10. ಕೊಲಂಬಿಯಾ ಏಷ್ಯಾ ಆಸ್ಪತ್ರೆ – ರಾಮಗೊಂಡನಹಳ್ಳಿ
11. ನ್ಯೂ ಹಾರಿಜನ್​ ಕಾಲೇಜು – ಕಾಡುಬೀಸನಹಳ್ಳಿ
12. ಆದರ್ಶ ರೀಟ್ರೀಸ್​ – ದೇವರಬೀಸನಹಳ್ಳಿ
13. ಎಪಿಸಿಯಾನ್​ ಮತ್ತು ದಿವ್ಯಾಶ್ರೀ – ಎಬಿಕೆ ಮತ್ತು ಯಮಲೂರು
14. ಪ್ರೆಸ್ಟೀಜ್​, ಆದರ್ಶ, ಸಲಪೂರಿಯಾ – ಮಾರತ್ತಹಳ್ಳಿ ಮತ್ತು ಕರಿಯಮ್ಮನ ಅಗ್ರಹಾರ
15. ನಲಪಾಡ್​ – ಚಲ್ಲಘಟ್ಟ
ಮಳೆ ಕಾಲುವೆ ಸಂಬಂಧಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್​ ಅವರು ಈ ವರದಿಯನ್ನು ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here