Mukesh Ambani: ಮುಖೇಶ್​ ಅಂಬಾನಿಗೆ ಮತ್ತೆ ಜೀವ ಬೆದರಿಕೆ

ಜಗತ್ತಿನ ದೈತ್ಯ ಉದ್ಯಮಿ ಮುಖೇಶ್​​ ಅಂಬಾನಿಗೆ (Mukesh Ambani) ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಓರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.

ಮುಂಬೈನಲ್ಲಿರುವ ರಿಲಯನ್ಸ್​ ಫೌಂಡೇಷನ್​ ಹಾಸ್ಪಿಟಲ್​ನ ( Reliance Foundation Hospital ) ಸಹಾಯವಾಣಿ (Helpline) ಸಂಖ್ಯೆಯಿಂದ ಹಲವು ಬಾರಿ ಬೆದರಿಕೆ ಕರೆ ಹಾಕಲಾಗಿದೆ.

ಬೆಳಗ್ಗೆ 10.30ರ ವೇಳೆ ಅಂಬಾನಿ ಮತ್ತವರ ಕುಟುಂಬದವರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಲಾಗಿದೆ.

ಬೆದರಿಕೆ ಹಾಕಿದ್ದಾನೆ ಎನ್ನಲಾಗಿರುವ ಶಂಕಿತನನ್ನು ಮುಂಬೈನ ದಹೀಸಾರ್​ನಲ್ಲಿ ವಶಕ್ಕೆ ಪಡೆಯಲಾಗಿದೆ.

ಕಳೆದ ವರ್ಷ ಅಂದರೆ ಫೆಬ್ರವರಿ 2021ರಲ್ಲಿ ಮುಂಬೈನಲ್ಲಿರುವ ಮುಖೇಶ್​ ಅಂಬಾನಿ ನಿವಾಸ (Ambani House) ಆಂಟಿಲಿಯಾದ (Antilia) ಬಳಿ ನಿಲ್ಲಿಸಿದ್ದ ಜಿಲೆಟಿನ್​ ಕಡ್ಡಿ ತುಂಬಿದ್ದ ಸ್ಕಾಪಿರ್ಯೋ ಪತ್ತೆ ಆಗಿತ್ತು. ಅದರ ಚಾಲಕ ಮನ್ಸುಖ್​ ಹಿರೇನ್​ ಕೊಲೆ ಆಗಿದ್ದ.

ಆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸಲಾಗಿತ್ತು.

ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿಗಳಾದ ಸಚಿನ್​ ವಜೆ (Sunila Vaze), ಸುನಿಲ್​ ವನೆ ಮತ್ತು ಎನ್​ಕೌಂಟರ್​ ಸ್ಪೆಷಲಿಸ್ಟ್​ ಪ್ರದೀಪ್​ ಶರ್ಮಾನನ್ನು ಬಂಧಿಸಲಾಗಿತ್ತು.

LEAVE A REPLY

Please enter your comment!
Please enter your name here