ATMನಲ್ಲಿ ಹಣ ವಿತ್​ ಡ್ರಾ ವಿಫಲವಾದರೆ ಗ್ರಾಹಕರಿಗೆ ದಂಡ

ಒಂದು ವೇಳೆ ನಿಮ್ಮ ಬ್ಯಾಂಕ್​ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಿದ್ದರೂ ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡಲು ಯತ್ನಿಸಿ ಆಗ ಹಣ ವಿತ್​ಡ್ರಾ ವಿಫಲವಾದರೆ ಆಗ ಅಂತಹ ಪ್ರತಿಯೊಂದು ವ್ಯವಹಾರಕ್ಕೂ ದಂಡ ಪಾವತಿಸಬೇಕಾಗುತ್ತದೆ.

ಮೇ 1ರಿಂದ ಅನ್ವಯವಾಗುವಂತೆ ಅಂತಹ ಪ್ರತಿ ವಿಫಲ (failed ATM cash withdrawal transactions) ಹಣದ ವ್ಯವಹಾರಕ್ಕೂ 10 ರೂಪಾಯಿ ದಂಡ ಮತ್ತು ಜಿಎಸ್​ಟಿ ಮೊತ್ತವನ್ನು ಪಾವತಿಸಬೇಕಾಗುತ್ತದೆ

ಎಂದು ಪಂಜಾಬ್​ ನ್ಯಾಷನಲ್​ ಬ್ಯಾಂಕ್ (Punjab National Bank)​ ತನ್ನ ಗ್ರಾಹಕರಿಗೆ ಸೂಚಿಸಿದೆ.

ಈ ಬಗ್ಗೆ ತನ್ನ ವೆಬ್​ಸೈಟ್​ನಲ್ಲಿ ಗ್ರಾಹಕರಿಗೆ PNB ಮಾಹಿತಿ ನೀಡಿದೆ. ಜೊತೆಗೆ ಗ್ರಾಹಕರ ಮೊಬೈಲ್​ಗೂ ಸಂದೇಶ ರವಾನಿಸಿದೆ.

2019ರಲ್ಲಿ ಓರಿಯೆಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್​ ಮತ್ತು ಯುನೈಟೆಡ್​ ಬ್ಯಾಂಕ್​ ಆಫ್​ ಇಂಡಿಯಾವನ್ನು ಪಿಎನ್​​ಬಿಯಲ್ಲಿ ವಿಲೀನಗೊಳಿಸಲಾಯಿತು.