ವಿದೇಶದಿಂದ ಲ್ಯಾಪ್ಟಾಪ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ಗಳ ಆಮದಿನ ಮೇಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಬಂಧ ಹೇರಿದೆ.
ಸ್ವದೇಶದಲ್ಲೇ ಲ್ಯಾಪ್ಟಾಪ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ಗಳ ಉತ್ಪಾದನೆಗೆ ಉತ್ತೇಜನ ನೀಡುವ ಸಲುವಾಗಿ ನಿರ್ಧಾರ ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ಹೇಳಿದೆ.
ಆಗಸ್ಟ್ 1ರಂದು ಅಂದರೆ 2 ದಿನಗಳ ಹಿಂದೆಯಷ್ಟೇ ದೇಶದ ಅತೀ ದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ರಿಯಲನ್ಸ್ ಜಿಯೋ ಜಿಯೋ ಬುಕ್ ಹೆಸರಲ್ಲಿ ಅಗ್ಗದ ಬೆಲೆಯ ಲ್ಯಾಪ್ಟಾಪ್ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಸರ್ಕಾರದ ತೀರ್ಮಾನ ಅಚ್ಚರಿ ಮೂಡಿಸಿದೆ.
ವಿದೇಶದಿಂದ ಲ್ಯಾಪ್ಟಾಪ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ಗಳ ಖರೀದಿ ಮೇಲೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಈ ಗಣಕ ಉತ್ಪನ್ನಗಳ ಬೆಲೆಗಳು ಇನ್ನಷ್ಟು ಏರಿಕೆ ಆಗುವ ನಿರೀಕ್ಷೆ ಇದೆ.
ADVERTISEMENT
ADVERTISEMENT