ADVERTISEMENT
ಬೆಂಗಳೂರಲ್ಲಿ (Bengaluru) ಹೌಸಿಂಗ್ ಸೊಸೈಟಿಯೊಂದರ (Housing Society) ಅಕ್ರಮದ ಬಹಿರಂಗವಾಗಿದ್ದು, ಈ ಹೌಸಿಂಗ್ ಸೊಸೈಟಿಯಲ್ಲಿ 316 ಕೋಟಿ ರೂಪಾಯಿ ಮೊತ್ತದ ಹಗರಣ ನಡೆದಿದೆ.
ದಿ ಕರ್ನಾಟಕ ಪೋಸ್ಟಲ್ ಮತ್ತು ಟೆಲಿಕಾಂ ನೌಕರರ ಹೌಸಿಂಗ್ ಸಹಕಾರ ಸೊಸೈಟಿ 2007ರಿಂದ ತನ್ನ ಬಳಿ ಹಂಚಿಕೆಗೆ ಲಭ್ಯ ಇರುವ 1,438 ನಿವೇಶನಗಳ ಬದಲು 3,391 ಮಂದಿಯಿಂದ ಸೈಟ್ ಆಕಾಂಕ್ಷಿತರಿಂದ ಠೇವಣಿ ಸಂಗ್ರಹಿಸಿದೆ.
ಆದರೆ ಈ ಹೌಸಿಂಗ್ ಸೊಸೈಟಿ ಬಳಿ ಹಂಚಿಕೆಗೆ ಇರುವ ನಿವೇಶನಗಳ (Sites) ಸಂಖ್ಯೆ ಕೇವಲ 1,438 ಮಾತ್ರ. ಮಾಹಿತಿಗಳ ಪ್ರಕಾರ ಈ ನಿವೇಶನಗಳನ್ನು ಇನ್ನೂ ಕೂಡಾ ಹಂಚಿಕೆ ಮಾಡಿಲ್ಲ.
ಬೆಂಗಳೂರು ಸುತ್ತಮುತ್ತದ ನೆಲಮಂಗಲ, ದೇವನಹಳ್ಳಿ ಮತ್ತು ವರ್ತೂರಲ್ಲಿ ಹೌಸಿಂಗ್ ಸೊಸೈಟಿ ನಿವೇಶನಕ್ಕಾಗಿ ಭೂಮಿ ಖರೀದಿಸಿತ್ತು.
ಸೊಸೈಟಿ ಅಕ್ರಮದ ಬಗ್ಗೆ ನಾಲ್ಕು ಹಂತಗಳಲ್ಲಿ ತನಿಖೆ ನಡೆದಿದ್ದು, ಈ ಎಲ್ಲ ತನಿಖೆಗಳಲ್ಲೂ ಸೊಸೈಟಿ ಅಕ್ರಮ ಎಸಗಿರುವುದು ದೃಢಪಟ್ಟಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಸಲ್ಲಿಕೆಯಾದ ತನಿಖೆಯಲ್ಲೂ ಸೊಸೈಟಿ 10 ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ.
ADVERTISEMENT