ಉತ್ತರಪ್ರದೇಶದ ಲಖೀಂಪುರದಲ್ಲಿ (Lakhimpurkeri) ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ರೇಪ್ ಮಾಡಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಕರಾಳ ಘಟನೆ ನಡೆದಿದೆ. ಈ ಪ್ರಕರಣದಲ್ಲಿ 6 ಜನರನ್ನು ಬಂಧಿಸಲಾಗಿದ್ದು, ಒಬ್ಬನ್ನು ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
15 ಮತ್ತು 17 ವರ್ಷದ ದಲಿತ ಯುವತಿಯರು ಬುಧವಾರ ಲಖೀಂಪುರ್ ಖೇರಿಯ (Lakhimpurkeri) ಕಬ್ಬಿನ ಗದ್ದೆಯ ಪಕ್ಕದ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಿನ್ನೆಯೇ ತನಿಖೆ ಆರಂಭಿಸಿದ್ದರು.
ಈ ಪ್ರಕರಣದಲ್ಲಿ ಸುಹೈಲ್, ಜುನೇದ್, ಹಫೀಜುಲ್ ರೆಹಮಾನ್, ಕರೀಮುದ್ದೀನ್ ಮತ್ತು ಆರೀಪ್ ಬಂಧನಕ್ಕೊಳಗಾಗಿದ್ದಾರೆ. ಅಲ್ಲದೇ, ಬಾಲಕಿಯನ್ನು ಇವರಿಗೆ ಪರಚಯಿಸಿದ್ದ ಪಕ್ಕದ ಮನೆಯ ಯುವಕ ಚೋಟು ಅನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ : ಶಿವಮೊಗ್ಗ : ಅಪ್ರಾಪ್ತೆ ಮೇಲೆ ಅತ್ಯಾಚಾರ – ವೃದ್ಧನಿಗೆ ಜೀವಾವಧಿ ಶಿಕ್ಷೆ
ಯುವತಿಯರನ್ನು ಕಬ್ಬಿನಗದ್ದೆಗೆ ಕರೆದೊಯ್ದಿದ್ದ ಸುಹೇಲ್ ಮತ್ತು ಜುನೈದ್ ಅತ್ಯಾಚಾರ ಎಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಹೇಳಿದ್ದಾರೆ.
ಯುವತಿಯರು ಮದುವೆ ಒತ್ತಾಯಿಸಿದ ನಂತರ ಸುಹೈಲ್ ಮತ್ತು ಜುನೇದ್ ಯುವತಿಉರ ದುಪ್ಪಟ್ಟಾದಿಂದಲೇ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಅನಂತರ ಸ್ಥಳಕ್ಕೆ ಬಂದಿದ್ದ ಕರೀಮುದ್ದೀನ್ ಮತ್ತು ಆರೀಪ್, ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಅವರು ಧರಿಸಿದ್ದ ದುಪ್ಪಟ್ಟಾದಿಂದ ಕುತ್ತಿಗೆಗೆ ಬಿಗಿದು ಮರಕ್ಕೆ ನೇತು ಹಾಕಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
2014 ರಲ್ಲಿಯೂ ಉತ್ತರಪ್ರದೇಶದ ಬದೌನದಲ್ಲಿ ಇಂತಹುದೇ ಕರಾಳ ಘಟನೆ ನಡೆದಿತ್ತು. ಇಬ್ಬರು ಸಹೋದರಿ ಬಾಲಕಿಯರನ್ನು ರೇಪ್ ಮಾಡಿ ಮರಕ್ಕೆ ಕಟ್ಟಿ ನೇಣು ಬಿಗಿಯಲಾಗಿತ್ತು.
ಇದನ್ನೂ ಓದಿ : 3 ವರ್ಷದ ಬಾಲಕಿ ಮೇಲೆ ಶಾಲಾ ಬಸ್ನಲ್ಲಿಯೇ ಚಾಲಕನಿಂದ ಅತ್ಯಾಚಾರ – ಬಂಧನ