ಸಿದ್ದರಾಮಯ್ಯಗೆ ಸಂತೋಷ ಆದ ಕುಮಾರಸ್ವಾಮಿ ಉದ್ದೇಶ ಏನು..?

ಪಕ್ಷಾಂತರ ಮಾಡಿ ಸರ್ಕಾರ ಬೀಳಿಸಿದ ಅನರ್ಹ ಶಾಸಕರು ಸೋಲಬೇಕು. ಈ ಚುನಾವಣೆಯಲ್ಲಿ ಜನತೆ ನೀಡುವ ತೀರ್ಪು ಬರಿ ಅನರ್ಹ ಶಾಸಕರಿಗಷ್ಟೇ ಅಲ್ಲ ಎಲ್ಲ‌ ರಾಜಕಾರಣಿಗಳಿಗೂ ಒಂದು ಪಾಠವಾಗಬೇಕು. ಹೀಗಾದಾಗ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತಾಡಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ, ನಮ್ಮಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಪಕ್ಷಾಂತರಿಗಳನ್ನು ಸೋಲಿಸಕೆಂಬ ಉದ್ದೇಶ ಹೊಂದಿರುವುದು ಸಂತೋಷದ ವಿಚಾರ. ಸ್ವಾರ್ಥ ಸಾಧನೆಗಾಗಿ ಸಂವಿಧಾನದ ನಿಯಮಗಳನ್ನು ಮೀರಿ, ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವವರಿಗೆ ಪಾಠ ಕಲಿಸಬೇಕು ಎಂಬುದು ನಮ್ಮೆಲ್ಲರ ಸಾಮಾನ್ಯ ಉದ್ದೇಶ ಎಂದರು.

ಸಂವಿಧಾನದಲ್ಲಿ ಪಕ್ಷಾಂತರ ಕಾಯ್ದೆಯನ್ನು ಸೇರಿಸಿರುವ ಉದ್ದೇಶವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲ. ಶಾಸಕರು ಮನಸ್ಸಿಗೆ ಬಂದಂತೆ ಪಕ್ಷ ಬದಲಾವಣೆ ಮಾಡುವಂತಿದ್ದರೆ ಜನಾಭಿಪ್ರಾಯಕ್ಕೆ ಬೆಲೆ ಇರುತ್ತದೆಯೇ? ಹಿಂದೆ ಈ ಕಾನೂನು ಜಾರಿಗೆ ತರುವಾಗ ಬಿಜೆಪಿಯವರು ಸಹ ಬೆಂಬಲಿಸಿದ್ದರು ಎಂಬುದನ್ನು ಅವರು ಮರೆತಂತಿದೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here