ADVERTISEMENT
ಹೊಯ್ಸಳ ರಾಜಮನೆತನದ ಮೂಲ ಊರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹೊಯ್ಸಳಲು ಗ್ರಾಮಕ್ಕೆ ಕೊನೆಗೂ ಸರ್ಕಾರಿ ಬಸ್ ಬಂದಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಊರಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಿದೆ.
200 ಜನರಿರುವ ಮಲೆನಾಡಿನ ಈ ಗ್ರಾಮಕ್ಕೆ ಮೂಡಿಗೆರೆ ಕೆಎಸ್ಆರ್ಟಿಸಿ ವಿಭಾಗದಿಂದ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಬಸ್ ಸಂಚಾರ ಆರಂಭವಾಗಿದೆ.
ಬಸ್ ಸಂಚಾರ ಇಲ್ಲದೇ ಈ ಊರಿನ ಜನ ಪ್ರತಿ ದಿನ 5 ಕಿಲೋ ಮೀಟರ್ ನಡೆದುಕೊಂಡೇ ಹೋಗ್ಬೇಕಿತ್ತು ಅಥವಾ ಆಟೋಗಳನ್ನು ಅಲವಂಬಿಸಬೇಕಿತ್ತು.
ಮೂಡಿಗೆರೆ ಶಾಸಕಿ ಆಗಿ ಆಯ್ಕೆಯಾಗಿರುವ ನಯನ ಮೋಟಮ್ಮ ಅವರಿಗೆ ಈ ಭಾಗದ ಜನ ಮನವಿ ಸಲ್ಲಿಸಿದ ಬಳಿಕ ಶಾಸಕಿಯವರ ವಿಶೇಷ ಸ್ಪಂದನೆಯಿಂದ ಊರಿಗೆ ಬಸ್ ಭಾಗ್ಯ ಸಿಕ್ಕಿದೆ.
ತಮ್ಮೂರಿಗೆ ಬಂದ ಮೊದಲ ಕೆಎಸ್ಆರ್ಟಿಸಿ ಬಸ್ಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ಖುಷಿಯಿಂದಲೇ ಬಸ್ನಲ್ಲಿ ಪ್ರಯಾಣಿಸಿದರು.
ಈ ವೇಳೆ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಸೋಮಶೇಖರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದೀಕ್ಷಿತ್ ಇದ್ದರು.
ಕಳೆದ 19 ವರ್ಷಗಳಲ್ಲಿ 15 ವರ್ಷದ ಎಂ ಪಿ ಕುಮಾರಸ್ವಾಮಿ ಬಿಜೆಪಿ ಶಾಸಕರಾಗಿದ್ದರು. ಆದರೂ ಊರಿಗೆ ಬಸ್ ವ್ಯವಸ್ಥೆ ಮಾಡಲು ಆಗಿರಲಿಲ್ಲ.
ಆದರೆ ನಯನ ಮೋಟಮ್ಮ ಮೊದಲ ಬಾರಿಗೆ ಶಾಸಕಿ ಆದ ಕೇವಲ 1 ತಿಂಗಳ ಅವಧಿಯಲ್ಲೇ ಬಸ್ ವ್ಯವಸ್ಥೆ ಮಾಡಿದ್ದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಶುರುವಾದ ಬಳಿಕ ಹಲವು ಹಳ್ಳಿಗಳಿಗೆ ಸರ್ಕಾರಿ ಬಸ್ಗಳ ಓಡಾಟ ಇಲ್ಲ ಎನ್ನುವುದನ್ನು ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರಕ್ಕೆ ಮೊಟಕಿತ್ತು.
ADVERTISEMENT