ಬಸ್ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಬಸ್ಗೆ ಕಲ್ಲೆಸೆದು ಹಾನಿ ಉಂಟು ಮಾಡಿದ ಮಹಿಳೆ ಕೊನೆಗೆ 5 ಸಾವಿರ ದಂಡ ಕಟ್ಟಿ ಅದೇ ಬಸ್ನಲ್ಲಿ ಪ್ರಯಾಣಿಸಿದ್ದಾರೆ.
ಕೊಪ್ಪಳದಿಂದ ಹೊಸಪೇಟೆಗೆ ಹೊರಟ್ಟಿದ್ದ ನಾನ್ಸ್ಟಾಪ್ ಬಸ್ಗೆ ಲಕ್ಷ್ಮೀ ಎಂಬಾಕೆ ಕಲ್ಲು ತೂರಾಟ ನಡೆಸಿ ಹಾನಿ ಮಾಡಿದ್ದರು.
ಬಳಿಕ ಆ ಮಹಿಳಾ ಪ್ರಯಾಣಿಕರನ್ನು ಬಸ್ನ ಡ್ರೈವರ್ ಕಂ ಕಂಡಕ್ಟರ್ ಆಗಿದ್ದ ಮುಕ್ಕಣ್ಣ ಅವರು ನೇರವಾಗಿ ಕೊಪ್ಪಳದ ಮುನಿರಾಬಾದ್ ಠಾಣೆಗೆ ಕರೆದುಕೊಂಡು ಬಂದರು.
ಬಳಿಕ ಬಸ್ಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ 5 ಸಾವಿರ ರೂಪಾಯಿ ದಂಡ ಕಟ್ಟಿ, ಕ್ಷಮೆ ಕೇಳಿ ಲಕ್ಷ್ಮೀ ಅದೇ ಬಸ್ನಲ್ಲಿ ತೆರಳಿದರು. ಬಾಗಲಕೋಟೆ ಜಿಲ್ಲೆಯ ಇಳ್ಕಲ್ ನಿವಾಸಿಯಾಗಿರುವ ಲಕ್ಷ್ಮೀ ಕೊಪ್ಪಳದ ಹೊಸ ಲಿಂಗಾಪುರದಲ್ಲಿ ಬಸ್ಗೆ ಕಲ್ಲೆಸೆದಿದ್ದರು.
ಇವರು ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಪಡೆದು ಊರಿಗೆ ವಾಪಸ್ ಆಗಲು ಬಸ್ಗಾಗಿ ಕಾಯುತ್ತಿದ್ದರು. ಆದರೆ ಬಸ್ ನಿಲ್ಲಿಸಿಲ್ಲ ಎಂಬ ಕಾರಣಕ್ಕಾಗಿ ಬಸ್ಗೆ ಕಲ್ಲು ತೂರಾಟ ನಡೆಸಿದ್ದರು.