ಪ್ರತಿ ಲೀಟರ್ಗೆ ಹಾಲಿನ ದರವನ್ನು ಮೂರು ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಸಭೆಯಲ್ಲಿ ದರ ಹೆಚ್ಚಳದ ನಿರ್ಧಾರ ಮಾಡಲಾಗಿದೆ.
ಆಗಸ್ಟ್ 1ರಿಂದ ಹಾಲಿನ ದರ ಹೆಚ್ಚಳ ಅನ್ವಯವಾಗಲಿದೆ. ಎಲ್ಲ ರೀತಿಯ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲಾಗಿದೆ.
ಐದು ರೂಪಾಯಿ ಹೆಚ್ಚಳಕ್ಕೆ ಕೆಎಂಎಫ್ ಪ್ರಸ್ತಾಪನೆ ಸಲ್ಲಿಸಿತ್ತು. ಆದರೆ ಮುಖ್ಯಮಂತ್ರಿಗಳು 3 ರೂಪಾಯಿ ಹೆಚ್ಚಳಕ್ಕೆ ಮಾತ್ರ ಒಪ್ಪಿಗೆ ನೀಡಿದ್ದಾರೆ.
ರೈತರಿಗೆ ನೀಡಲಾಗುತ್ತಿರುವ ಹಾಲಿನ ಸಹಾಯಧನ ಕೂಡಾ ಲೀಟರ್ಗೆ 3 ರೂಪಾಯಿ ಹೆಚ್ಚಳವಾಗಲಿದೆ.
ADVERTISEMENT
ADVERTISEMENT