ಕಿಂಗ್ಸ್​ ಇಲೆವನ್ ಪಂಜಾಬ್ : ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆಗೆ ಕೊಕ್

Anil Kumble

ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ (Anil Kumble) ಅವರನ್ನು ಮುಂದುವರಿಸದಿರಲು ನಿರ್ಧರಿಸಿದೆ.

ಅನಿಲ್ ಕುಂಬ್ಳೆ(Anil Kumble) ಅವರ ಮುಖ್ಯ ಕೋಚ್ ಗುತ್ತಿಗೆ ಅವಧಿ ಮುಗಿಯಲಿದ್ದು, ಮುಂದಿನ ಅವಧಿಗೆ ಮುಂದುವರಿಸಲು ಪಂಜಾನ್ ಕಿಂಗ್ಸ್ ತಂಡ ಒಲವು ಹೊಂದಿಲ್ಲ. ಪಂಜಾಬ್ ಕಿಂಗ್ಸ್ ತಂಡದ ಮಾಲೀಕರ ಮಂಡಳಿ, ಕುಂಬ್ಳೆ ಅವರನ್ನು ಮುಂದುವರಿಸದಿರಲು ನಿರ್ಧರಿಸಿದೆ ಎಂದು ಸ್ಪೋರ್ಟ್​​ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಇದನ್ನೂ ಓದಿ : ಪಂಜಾಬ್ ಕಿಂಗ್ಸ್‌ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ ಆಸ್ಪತ್ರೆಗೆ ದಾಖಲು

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಅನಿಲ್ ಕುಂಬ್ಳೆ ಅವರು 2020ರ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು.

ಕುಂಬ್ಳೆ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ 42 ಪಂದ್ಯ ಆಡಿದ್ದು, ಅದರಲ್ಲಿ 18 ಗೆಲುವು ಮತ್ತು 22 ಸೋಲು ದಾಖಲಿಸಿದ್ದು, ಎರಡು ಪಂದ್ಯ ಟೈ ಆಗಿದೆ.

LEAVE A REPLY

Please enter your comment!
Please enter your name here