ಬೆಂಗಳುರಿನ ಕೆಂಗೇರಿಯಲ್ಲಿ ನಡೆದಿದ್ದ ಬಾಕ್ಸಿಂಗ್ನಲ್ಲಿ ಒಂದೇ ಏಟಿಗೆ ಬಾಕ್ಸರ್ ಸಾವನ್ನಪ್ಪಿರುವ ದುರಂತ ಪ್ರಕರಣ ವರದಿಯಾಗಿದೆ.
ಮೈಸೂರಿನ ಹೊಸಕೇರಿ ನಿವಾಸಿ ಬಾಕ್ಸರ್ ನಿಖೀಲ್ (23) ಸಾವನ್ನಪ್ಪಿದ್ದಾರೆ.
ಜುಲೈ 10 ರಂದು ಬೆಂಗಳುರಿನ ಕೆಂಗೇರಿಯಲ್ಲಿ ಬಾಕ್ಸಿಂಗ್ ಕಿಕ್ ಬಾಕ್ಸಿಂಗ್ ಸ್ಪರ್ಧೆ ನಡೆದಿತ್ತು. ಬಾಕ್ಸರ್ ನಿಖಿಲ್ ಎದುರಾಳಿಯೊಂದಿಗೆ ರಿಂಗ್ನಲ್ಲಿ ಸೆಣಸಾಟ ನಡೆಸಿದ್ದರು. ಈ ವೇಳೆ ಎದುರಾಳಿ ನೀಡಿದ ಒಂದೇ ಏಟಿಗೆ ಬಾಕ್ಸರ್ ನಿಖಿಲ್ ರಿಂಗ್ನಲ್ಲಿಯೇ ಕುಸಿದು ಬಿದ್ದಿದ್ದಾರೆ.
ಕುಸಿದು ಬಿದ್ದ ಬಾಕ್ಸರ್ ನಿಖಿಲ್ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶ ಭಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ವೈದ್ಯರು ತಿಳಿಸಿದ್ದರು. 2 ದಿನಗಳ ಕಾಲ ಕೋಮಾದಲ್ಲಿದ್ದ ಬಾಕ್ಸರ್ ನಿಖಿಲ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಕಿಕ್ ಬಾಕ್ಸಿಂಗ್ ಸ್ಪರ್ಧೆಯ ಆಯೋಜಕರ ವಿರುದ್ಧ ನಿಖಿಲ್ ಕುಟುಂಬಸ್ಥರು ದೂರು ನೀಡಿದ್ದಾರೆ. ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.