ಕಿಚ್ಚ ಸುದೀಪ್ ಅವರು ನಾಳೆ ಬಿಜೆಪಿ ಸೇರಲಿದ್ದಾರೆ. ಈ ಮೂಲಕ ನಾಳೆಯಿಂದ ಅಧಿಕೃತವಾಗಿ ರಾಜಕಾರಣಿ ಆಗಲಿದ್ದಾರೆ.
ನಾಳೆ ಮಧ್ಯಾಹ್ನ 1.30 ನಿಮಿಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮುಖದಲ್ಲಿ ಬಿಜೆಪಿಗೆ ಸೇರಲಿದ್ದಾರೆ.
ಕಿಚ್ಚ ಸುದೀಪ್ ನಾಯಕ ಸಮುದಾಯದವರು. ಹೀಗಾಗಿ ST ಮತ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಲಾಭ ಆಗಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ.
ಕೆಲ ದಿನಗಳ ಹಿಂದಷ್ಟೇ ಕಿಚ್ಚ ಸುದೀಪ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದರು. ಈ ವೇಳೆ ಅವರು ಕಾಂಗ್ರೆಸ್ ಸೇರಬಹುದು ಎಂಬ ಗುಸು ಗುಸು ಸುದ್ದಿ ಹಬ್ಬಿತ್ತು.
ಆದರೆ ಕೈ ಹಿಡಿಯುವುದು ಬೇಡ ಎಂದು ನಿರ್ಧರಿಸಿರುವ ಸುದೀಪ್ ಹೂ ಮುಡಿಯಲು ಸಿದ್ಧರಾಗಿದ್ದಾರೆ.
ADVERTISEMENT
ADVERTISEMENT