Kiccha Sudeep ಮಾನನಷ್ಟ: ಆರೋಪಿತರಿಗೆ ಕೋರ್ಟ್​ನಿಂದ ಸಮನ್ಸ್​

ನಟ ಕಿಚ್ಚ ಸುದೀಪ್​ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಪ್ರತಿವಾದಿಗಳಿಗೆ ಬೆಂಗಳೂರಿನ ನ್ಯಾಯಾಲಯ ನೋಟಿಸ್​ ಜಾರಿ ಮಾಡಿದೆ.

ಮಾನನಷ್ಟ ಪ್ರಕರಣದಲ್ಲಿ ಆರೋಪಿಗಳಾಗಿರುವ ನಿರ್ಮಾಪಕ ಎಂ.ಎನ್.ಕುಮಾರ್ ಮತ್ತು ಸುರೇಶ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ.

ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ ಅವರು ಸಮನ್ಸ್​ ಜಾರಿಗೊಳಿಸಿದ್ದು, ಆಗಸ್ಟ್​ 26ರಂದು ಹಾಜರಾಗುವಂತೆ ಆರೋಪಿತರಿಗೆ ಸೂಚಿಸಿದ್ದಾರೆ.

7-8 ವರ್ಷಗಳ ಹಿಂದೆ ನನ್ನಿಂದ ಮುಂಗಡ ಹಣ ಪಡೆದಿದ್ದ ಕಿಚ್ಚ ಸುದೀಪ್​ ಅವರು ನನಗೆ ಸಿನಿಮಾಗಾಗಿ ಕಾಲ್​ಶೀಟ್​ ಕೊಟ್ಟಿಲ್ಲ, ನನ್ನ ಹಣವನ್ನೂ ವಾಪಸ್​ ಕೊಟ್ಟಿಲ್ಲ ಎಂದು ನಿರ್ಮಾಪಕ ಎಂ ಎನ್​ ಕುಮಾರ್​ ಅವರು ಬಹಿರಂಗವಾಗಿ ಆರೋಪಿಸಿದ್ದರು.

ನಿರ್ಮಾಪಕ ಕುಮಾರ್​ ಅವರ ಆರೋಪದಿಂದ ನನ್ನ ಮಾನಹಾನಿಯಾಗಿದೆ ಎಂದು ಆರೋಪಿಸಿ ಕಿಚ್ಚ ಸುದೀಪ್​ ಅವರು ದಾವೆ ಹೂಡಿದ್ದರು.

LEAVE A REPLY

Please enter your comment!
Please enter your name here