ಖೋ ಖೋ ಆಡುವ ವೇಳೆ ಆಯತಪ್ಪಿ ಬಿದ್ದು ವಿದ್ಯಾರ್ಥಿ ಸಾವು

ಖೋಖೋ ಆಟದ ವೇಳೆ ಆಯತಪ್ಪಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹರದನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ.

9ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಶಶಾಂತ್​ ಮೃತಪಟ್ಟ ವಿದ್ಯಾರ್ಥಿ.

ಶಾಲೆ ಸಮಯ ಮುಗಿದ ನಂತರ ಖೋಖೋ ಆಟ ಅಭ್ಯಾಸ ಮಾಡುತ್ತಿದ್ದ ವೇಳೆ ಶಶಾಂಕ್​ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.

ತಕ್ಷಣವೇ ಹುಡುಗನನ್ನು ಹೆಚ್​ ಡಿ ಕೋಟೆ ತಾಲೂಕಿನ ಹಂಪಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮೈಸೂರಲ್ಲಿರುವ ಕೆ ಆರ್​ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಆದರೆ ಬಾಲಕ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. 

ಈ ಬಾಲಕ ಹರದನಹಳ್ಳಿ ಗ್ರಾಮದ ಎಚ್.ಎಸ್. ಪಾಪಣ್ಣ ಮತ್ತು ಕುಮಾರಿ ದಂಪತಿ ಪುತ್ರ.

ಆಯತಪ್ಪಿ ಬಿದ್ದಿರುವುದು ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.