ಧ್ವನೀರ್ ‘ವಾಮನ’ ಸಿನಿಮಾಗೆ ಖಡಕ್ ಖಳ ನಟ ಎಂಟ್ರಿ – ಸಂಪತ್ ಕುಮಾರ್ ಪವರ್ ಫುಲ್ ಪಾತ್ರ

ಶೋಕ್ದಾರ್ ಧನ್ವೀರ್ ಗೌಡ ನಟಿಸ್ತಿರುವ ಬಹುನಿರೀಕ್ಷಿತ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗ್ಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಇದೀಗ ವಾಮನ ಬಳಗಕ್ಕೆ ಮತ್ತೊಬ್ಬ ಸದಸ್ಯ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷಾ ನಟ, ಖಳನಾಯಕನ ಪಾತ್ರದಲ್ಲಿ ಮಿಂಚುವ ಸಂಪತ್ ವಾಮನ ತಂಡ ಸೇರಿಕೊಂಡಿದ್ದಾರೆ.

ಮೂರು ಶೇಡ್ ನಲ್ಲಿ ಸಂಪತ್

ವಾಮನ ಪಾತ್ರದಲ್ಲಿ ಸಂಪತ್ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇಡೀ ಮಾಫಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಕ್ರೂರಿಯಾಗಿ ಬದುಕುವ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂರು ಶೇಡ್ ನಲ್ಲಿ ಸಂಪತ್ ಅಬ್ಬರಿ ಬೊಬ್ಬಿರಿಯಲಿದ್ದು, ಅವರ ಪಾತ್ರಕ್ಕಾಗಿಯೇ ಪ್ರತ್ತೇಕ್ಷವಾಗಿ ಕಾಸ್ಟ್ಯೂಮ್ ಡಿಸೈನ್
ಎನ್ನುತ್ತಾರೆ ನಿರ್ದೇಶಕ ಶಂಕರ್.

ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಬರಹಗಾರನಾಗಿ, ಸಂಭಾಷಣೆಗಾರನಾಗಿ ಗುರುತಿಸಿಕೊಂಡಿರುವ ಶಂಕರ್ ರಾಮನ್ ಎಸ್ ವಾಮನ ಸಿನಿಮಾ ಮೂಲಕ ನಿರ್ದೇಶನದ ಮೊದಲ ಹೆಜ್ಜೆ ಇಟ್ಟಿದ್ದು, ಶಂಕರ್ ಕನಸಿಗೆ ಫ್ಯಾಷನೇಟೇಡ್ ಪ್ರೊಡ್ಯೂಸರ್ ಚೇತನ್ ಗೌಡ ಸಾಥ್ ಕೊಟ್ಟಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ ನಡಿ ಮೂಡಿ ಬರ್ತಿರುವ ಮಾಸ್ ಆಕ್ಷನ್ ಎಂಟರ್ಟೇನರ್ ವಾಮನ ಸಿನಿಮಾದಲ್ಲಿ ಧನ್ವೀರ್ ಗೆ ಜೋಡಿಯಾಗಿ ರಚನಾ ರೈ ನಟಿಸ್ತಿದ್ದು, ಮಹೇನ್ ಸಿಂಹ ಛಾಯಾಗ್ರಾಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಃ ಸಂಕಲನ, ಅರ್ಜುನ್ ರಾಜ್, ಜಾಲಿ ಬಾಸ್ಟಿನ್ ಸಾಹಸಸಿನಿಮಾಕ್ಕಿದೆ.

ಲೈವ್ ಲೋಕೇಷನ್ ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ಸ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ವಾಮನ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಚೇತನ್ ಗೌಡ, ದೊಡ್ಡ ಮಟ್ಟದ ಸಿನಿಮಾ ಮಾಡುವ ಆಸಕ್ತಿ-ಶಕ್ತಿ ಎರಡು ಅವರಲಿದೆ ಎನ್ನುತ್ತಾರೆ ನಿರ್ದೇಶಕ ಶಂಕರ್

LEAVE A REPLY

Please enter your comment!
Please enter your name here