ಈಗ ಎಲ್ಲೆಲ್ಲೂ ಕೆಜಿಎಫ್ನದ್ದೇ. ಕೆಜಿಎಫ್ ಹಬ್ಬಕ್ಕೆ, ಕೆಜಿಎಫ್ ಜಾತ್ರೆಗೆ ಉಳಿದಿರುವುದು ಐದು ದಿನಗಳು ಮಾತ್ರ. ಕೆಜಿಎಫ್ ಗಾಗಿ ಅಭಿಮಾನಿಗಳು ಎಷ್ಟು ಕಾತರದಿಂದ ಕಾಯ್ತಿದ್ದಾರೆ ಅಂದ್ರೆ ಈಗಾಗಲೇ 1 ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್ಔಟ್ ಆಗಿದೆ.
ಕೆಜಿಎಫ್ ಹಿಂದಿ ಅವತರಣಿಕೆಯ ಅಡ್ವಾನ್ಸ್ ಬುಕ್ಕಿಂಗ್ ಶುರು ಆದ ಕೇವಲ 12 ಗಂಟೆಗಳಲ್ಲಿ 1 ಲಕ್ಷದ 7 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿದೆ. ಇಷ್ಟು ಟಿಕೆಟ್ ಮಾರಾಟದಿಂದ ಥಿಯೇಟರ್ ಮಾಲೀಕರಿಗೆ 3 ಕೋಟಿ 35 ಲಕ್ಷ ರೂಪಾಯಿ ಬಂದಿದ್ಯAತೆ.
ದೆಹಲಿಯಲ್ಲಿ 75 ಲಕ್ಷ ರೂಪಾಯಿ ಮೊತ್ತದಷ್ಟು ಟಿಕೆಟ್ ಸೋಲ್ಡ್ಔಟ್ ಆಗಿದ್ರೆ, ಮುಂಬೈನಲ್ಲಿ 65 ಲಕ್ಷ ರೂಪಾಯಿ ಮೊತ್ತದಷ್ಟು ಟಿಕೆಟ್ ಬಿಕರಿ ಆಗಿದೆ. ಪುಣೆ, ಸೂರತ್, ಕೋಲ್ಕತ್ತಾ, ಜೈಪುರ, ಲಕ್ನೋದಲ್ಲಿ ಕೆಜಿಎಫ್ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಜೋರಾಗಿದೆ.
ಅಂದಹಾಗೆ ರಾಜಮೌಳಿ ನಿರ್ದೇಶನದ ಜ್ಯೂನಿಯರ್ ಎನ್ಟಿಆರ್, ರಾಮ್ಚರಣ್ ಆಕ್ಟಿಂಗ್ನ ಆರ್ ಆರ್ ಆರ್ ಸಿನಿಮಾದ ಎಲ್ಲ ದಾಖಲೆಗಳನ್ನೂ ಪುಡಿಗಟ್ಟಲು ನಮ್ಮ ರಾಕಿಭಾಯ್ ಸಿನಿಮಾ ರೆಡಿ ಆಗಿದೆ. ಮಾಹಿತಿಗಳ ಪ್ರಕಾರ ಆರ್ಆರ್ಆರ್ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಮೊತ್ತ 5.08 ಕೋಟಿ ರೂಪಾಯಿ. ಆರ್ಆರ್ಆರ್ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಿದ್ದು 3,788 ಶೋಗಳಿಗಾಗಿ. ಆದ್ರೆ ಕೆಜಿಎಫ್ ಚಾಪ್ಟರ್-2 ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಶುರು ಆಗಿರುವುದು 1,839 ಶೋಗಳಿಗಷ್ಟೇ, ಆಗಲೇ ಕೆಜಿಎಫ್ 3.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಆಗಿದೆ.
ಬುಧವಾರದ ವೇಳೆ ಅಡ್ವಾನ್ಸ್ ಬುಕ್ಕಿಂಗ್ನಿAದ ಕೆಜಿಎಫ್ ಕಲೆಕ್ಷನ್ ಹಿಂದಿ ಪ್ರೇಕ್ಷಕರ ವಲಯದಲ್ಲಿ 15ರಿಂದ 17 ಕೋಟಿ ರೂಪಾಯಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಆರ್ಆರ್ಆರ್ ಸಿನಿಮಾದ ಮೂರು ಪಟ್ಟು ಕಲೆಕ್ಷನ್ ಅಡ್ವಾನ್ಸ್ ಬುಕ್ಕಿಂಗ್ನಲ್ಲೇ ಕೆಜಿಎಫ್ ಪಾಲಾಗುವ ಲೆಕ್ಕಾಚಾರ ಇದೆ.
ಏಪ್ರಿಲ್ 14ರಂದು ಕೆಜಿಎಫ್ ರಿಲೀಸ್ ಆಗ್ತಿದೆ. ಆ ವೇಳೆಗೆ ಮೊದಲ ವಾರದಲ್ಲಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ. ಏಪ್ರಿಲ್ 14ರಿಂದ ಸಾಲು ಸಾಲು ರಜೆಗಳಿರುವುದೂ ಕೆಜಿಎಫ್ಗೆ ಪ್ಲಸ್ ಪಾಯಿಂಟ್. ಅಂದಹಾಗೆ ಇಡೀ ಭಾರತದ 6 ಸಾವಿರ ಥಿಯೇಟರ್ಗಳಲ್ಲಿ ಕೆಜಿಎಫ್ ರಿಲೀಸ್ ಆಗ್ತಿದೆ.