KGF2 ಯಶಸ್ಸಿನಲ್ಲಿ ಯಶ್ ಎಂಬ ರಾಕಿ ಭಾಯ್ ತೇಲುತ್ತಿದ್ದಾರೆ. ಆದರೆ ಮೈಮರೆತಿಲ್ಲ. ಈಗಲೂ ಅದೇ ವಿನಮ್ರತೆ.. ಆತ್ಮಭಿಮಾನ.. ಜೇಬಲ್ಲಿ ಕೇವಲ 300 ರೂಪಾಯಿ ಜೇಬಲ್ಲಿ ಇಟ್ಕೊಂಡು ಬೆಂಗಳೂರಿಗೆ ಬಂದ ಯಶ್ ಗೆ ಸಕ್ಸಸ್ ಅನ್ನೋದು ರಾತ್ರೋರಾತ್ರಿ ಏನು ಬಂದಿಲ್ಲ. ಸಧ್ಯ ವಿಲಾಸಿ ಜೀವನ ನಡೆಸುತ್ತಿರುವ ಯಶ್ ಲೈಫ್ ಸ್ಟೈಲ್ ಹೇಗಿದೆ? ಅವರ ಮನೆ ಯಾವ ರೀತಿಯಲ್ಲಿ ಇದೇ.. ಅವರು ಬಳಸುವ ಕಾರ್ ಎಂಥದ್ದು ಎಂಬುದನ್ನು ಪ್ರತಿಕ್ಷಣ ನ್ಯೂಸ್ exclusive ಆಗಿ ರಿವೀಲ್ ಮಾಡುತ್ತಿದೆ ನೋಡಿ.
ಯಶ್ ಆಸ್ತಿ ಎಷ್ಟು?
KGF2 ಗೂ ಮೊದಲು ರಾಕಿಂಗ್ ಸ್ಟಾರ್ ಯಶ್ ಅವರೇ ಘೋಷಿಸಿಕೊಂಡಂತೆ 7 ಮಿಲಿಯನ್ ಡಾಲರ್ ಒಡೆಯ. ಅಂದ್ರೆ, 53 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಯಶ್ ಹೊಂದಿದ್ದಾರೆ.
ಯಶ್ ಮನೆ ಎಲ್ಲಿದೆ? ಹೇಗಿದೆ?
KGF ಚಾಪ್ಟರ್ ಒನ್ ರಿಲೀಸ್ ಗೆ ಮೊದಲು ಬಾಡಿಗೆ ಮನೆಯಲ್ಲಿ ಇದ್ದ ಯಶ್, KGF ಸಕ್ಸಸ್ ಬಳಿಕ ವಿಂಡ್ಸರ್ ಮ್ಯಾನರ್ ಪಕ್ಕದಲ್ಲೇ ಇರುವ ವಿಲಾಸಿ ಪ್ರೆಸ್ಟೀಜ್ ಗಾಲ್ಫ್ ಅಪಾರ್ಟ್ಮೆಂಟ್ ಗೆ ಕುಟುಂಬ ಸಮೇತ ಶಿಫ್ಟ್ ಆದರು. ಈ ಐಷಾರಾಮಿ ಬಂಗಲೆಯ ಬೆಲೆ ಬರೋಬ್ಬರಿ 6 ಕೋಟಿ ರೂಪಾಯಿ.
ಯಶ್ ಒಂದು ಸಿನಿಮಾದ ಸಂಭಾವನೆ ಎಷ್ಟು?
ಮಾಹಿತಿ ಪ್ರಕಾರ ಯಶ್ ತಾವು ನಟಿಸುವ ಚಿತ್ರಗಳಿಗೆ ಏನಿಲ್ಲ ಎಂದರೂ ನಾಲ್ಕರಿಂದ ಆರು ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ. ಜೊತೆಗೆ ಸಿನೆಮಾದ ಲಾಭದಲ್ಲಿ ಪ್ರಾಫಿಟ್ ಶೇರ್ ಕೂಡಾ ಪಡೆಯುತ್ತಾರೆ.
ಜಾಹೀರಾತುಗಳಿಂದ ಯಶ್ ಎಷ್ಟು ಪಡೆಯುತ್ತಾರೆ?
ಯಶ್ ಅನೇಕ ಉತ್ಪನ್ನಗಳಿಗೆ ರಾಯಭಾರಿ ಆಗಿಯೂ ವ್ಯವಹರಿಸುತ್ತಾ ಇದ್ದಾರೆ. ಒಂದೊಂದು ಜಾಹೀರಾತಿಗೆ ಏನಿಲ್ಲ ಎಂದರೂ 60ಲಕ್ಷ ರೂಪಾಯಿಗಿಂತ ಜಾಸ್ತಿ ಸಂಭಾವನೆ ಪಡೆಯುತ್ತಾರೆ.
ಯಶ್ ಕಾರ್ ಕಲೆಕ್ಷನ್ ಹೇಗಿದೆ?
ರಾಖಿಭಾಯ್ ಬಳಿ ದುಬಾರಿ ಬೆಲೆಯ ಐಷಾರಾಮಿ ಕಾರ್ ಗಳ ಕಲೆಕ್ಷನ್ ಇದೆ. ರೇಂಜ್ ರೋವರ್ ಈವೊಕ್ಯೂ… ಇದರ ಬೆಲೆ 60ರಿಂದ 80 ಲಕ್ಷ ರೂಪಾಯಿ. 85 ಲಕ್ಷ ಬೆಲೆ ಬಾಳುವ ಮೆರ್ಸಿಡೆಜ್ ಬೆಂಜ್ GLS ಕಾರ್ ಕೂಡಾ ಯಶ್ ಬಳಿ ಇದೆ. ಇದಲ್ಲದೆ 80 ಲಕ್ಷದ ಆಡಿ Q7, 70 ಲಕ್ಷದ BMW 520ದ, 40 ಲಕ್ಷದ ಪೆಜೇರೋ ಸ್ಪೋರ್ಟ್ಸ್ ಕಾರ್ ಕೂಡಾ ಯಶ್ ಹತ್ತಿರ ಇವೆ.