ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಾ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಹಿಂದಿ ಚಿತ್ರ ಇಂದು ಮತ್ತೊಂದು ದಾಖಲೆ ಸೃಷ್ಟಿಸಿದೆ.
ರಾಷ್ಟ್ರಭಾಷೆ ವಿವಾದದ ನಡುವೆ ಕನ್ನಡದ ಚಿತ್ರ ಕೆಜಿಎಫ್-2 ಹಿಂದಿಯ ಗಳಿಕೆಯಲ್ಲಿ ದಾಖಲೆಯನ್ನು ಬರೆದಿದೆ. ಕೆಜಿಎಫ್-2 ಚಿತ್ರ ಹಿಂದಿ ಭಾಷೆಯ(ಬಾಲಿವುಡ್)ಲ್ಲಿ ಅತ್ಯಂತ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಮೂರನೇ ಸ್ಥಾನಕ್ಕೇರಿದೆ.
ಟೈಗರ್ ಜಿಂದಾ ಹೈ, ಪಿಕೆ ಮತ್ತು ಸಂಜು ಚಿತ್ರಗಳನ್ನು ಹಿಂದಿಕ್ಕಿರುವ ಕೆಜಿಎಫ್ ಚಾಪ್ಟರ್ 2 ಎರಡನೇ ವಾರದಲ್ಲಿ ಒಟ್ಟಾರೇ 343.13 ಕೋಟಿ ದೋಚುವ ಮೂಲಕ ಈ ಸಾಧನೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಾಲಿವುಡ್ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್, ಏಪ್ರಿಲ್ 14 ರಂದು ವಿಶ್ವದಾದ್ಯಂತ ತೆರೆ ಕಂಡ ಕೆಜಿಎಫ್ ಚಾಪ್ಟರ್ 2 ಚಿತ್ರ ಎರಡನೇ ವಾರಾಂತ್ಯದಲ್ಲಿ ಶುಕ್ರವಾರ 11.56 ಕೋಟಿ, ಶನಿವಾರ 18.25 ಕೋಟಿ, ಭಾನುವಾರ 22.68 ಕೋಟಿ, ಸೋಮವಾರ 8.28 ಕೋಟಿ, ಮಂಗಳವಾರ 7.48 ಕೋಟಿ, ಬುಧವಾರ 6.25 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿಸಿದ್ದಾರೆ.
#KGF2 crosses #TigerZindaHai, #PK and #Sanju *lifetime biz*… NOW, 3RD HIGHEST GROSSING *HINDI* FILM… [Week 2] Fri 11.56 cr, Sat 18.25 cr, Sun 22.68 cr, Mon 8.28 cr, Tue 7.48 cr, Wed 6.25 cr. Total: ₹ 343.13 cr. #India biz. #Hindi pic.twitter.com/zcmXDedEuQ
— taran adarsh (@taran_adarsh) April 28, 2022