ಖ್ಯಾತ ನಟಿ ತ್ರಿಷಾ, ಖುಷ್ಬೂ ನಂತರ ‘ಕೀರ್ತಿ ಸುರೇಶ್​’ಗೆ ಕೊರೋನಾ ದೃಢ

ತಮಿಳು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅವರಿಗೆ ಇಂದು ಕೋರೋನಾ ಸೋಂಕು ದೃಢವಾಗಿದೆ. ಈ ಬಗ್ಗೆ ಕೀರ್ತಿ ಸುರೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಲುವ ಮೂಲಕ ದೃಢಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೀರ್ತಿ ಸುರೇಶ್ಅ ವರು, ನನಗೆ ಕೊರೋನಾ ಸೋಂಕು ದೃಢವಾಗಿದೆ. ಸೌಮ್ಯ ಕೊರೋನಾ ಲಕ್ಷಣಗಳಿವೆ ಎಂದು ಬರೆದುಕೊಂಡಿದ್ದಾರೆ.

ತಮಿಳು ಚಿತ್ರರಂಗದ ಖ್ಯಾತ ನಟಿಯರಾದ ತ್ರಿಷಾ, ಖಷ್ಬೂ ಹಾಗೂ ರೈಜಾ ವಿಲ್ಸನ್ ಅವರಿಗೆ ಇತ್ತೀಚೆಗಷ್ಟೇ ಕೊರೋನಾ ಸೋಂಕು ದೃಢವಾಗಿತ್ತು.

ಇನ್ನು, ನಟಿ ಕೀರ್ತಿ ಸುರೇಶ್ ಅವರು ಮತೇಶ್ವರನ್ ನಿರ್ದೇಶನದ ಸಾನಿ ಕಾಯಿಧಮ್ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here