ಯಡಿಯೂರಪ್ಪರ ಬದಲು ಬರೋನು ಕೂಡ ಭ್ರಷ್ಟನೇ ಆಗಿರುತ್ತಾನೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ತುಮಕೂರು: ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾಗಿ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ತುಮಕೂರಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸಲು ಬಂದ ವೇಳೆ ಅವರು ಮಾತನಾಡಿದ್ದು, ಈಗ ಯಡಿಯೂರಪ್ಪರನ್ನ ಬದಲು ಮಾಡ್ತಾರೆ. ಆದರೆ ಬರೋನು ಕೂಡ ಭ್ರಷ್ಟನೇ ಆಗಿರುತ್ತಾನೆ ಎಂದು ಬಿಜೆಪಿ ನಾಯಕರನ್ನು ಟೀಕೆ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ನೆರೆ ನಡುವೆಯೂ ಅಧಿಕಾರಕ್ಕಾಗಿ ಬಿಜೆಪಿ ಮುಖಂಡರು ಕಿತ್ತಾಡುತ್ತಿದ್ದಾರೆ ಎಂದರು. ಅವರು ನೆರೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅವರಿಗೆ ಅಧಿಕಾರ ಮುಖ್ಯ ಎಂದರು.

 

LEAVE A REPLY

Please enter your comment!
Please enter your name here