ಮಾನವೀಯತೆ ದೃಷ್ಟಿಯಿಂದ ಯಡಿಯೂರಪ್ಪನವರನ್ನು ಭೇಟಿಯಾಗಿದ್ದೇನೆ: ಸಾರಾ ಮಹೇಶ್

ಬೆಂಗಳೂರು: ನಾನು ಬೇರೆ ಪಕ್ಷದವನ್ನಾಗಿದ್ದರೂ ಮಾನವೀಯತೆ ದೃಷ್ಟಿಯಿಂದ ಯಡಿಯೂರಪ್ಪನವರನ್ನು ಭೇಟಿಯಾಗಿದ್ದೇನೆ ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿಕೆ ನೀಡಿದ್ದಾರೆ.

ಇಂದು ಹಂಗಾಮಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಹೊರ ಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಸಾರಾ ಮಹೇಶ್, ಈಗ ನಾನು ಬೇರೆ ಪಕ್ಷದಲ್ಲಿರಬಹುದು. ಆದರೆ 20 ವರ್ಷ ನಾನು ಯಡಿಯೂರಪ್ಪ ಜೊತೆಯಾಗಿ ಹೋರಾಟ ನಡೆಸಿದ್ದು, ಒಟ್ಟಿಗೆ ರಾಜಕೀಯದಲ್ಲಿ ಬೆಳೆದಿದ್ದೇವೆ ಎಂದಿದ್ದಾರೆ.

ಇನ್ನು ಯಡಿಯೂರಪ್ಪನವರನ್ನು ಭೇಟಿ ಮಾಡಲು ಬಂದ ಸಾರಾ ಮಹೇಶ್ ಅವರ ಕುಶಲೋಪರಿಯನ್ನ ಬಿಎಸ್ ವೈ ವಿಚಾರಿಸಿದ್ದು, ಸಾರಾ ಮಹೇಶ್ ಭೇಟಿ ಬಳಿ ನಿಮ್ಮ ಆರೋಗ್ಯ ಹೇಗಿದೆ ಎಂದು ಕೇಳಿದ್ದಾರೆ.

LEAVE A REPLY

Please enter your comment!
Please enter your name here