ಕರ್ನಾಟಕದಲ್ಲಿ ಒಟ್ಟು 46,149 ರೌಡಿಶೀಟರ್ಗಳಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ವಿಧಾನಪರಿಷತ್ಗೆ ಮಾಹಿತಿ ನೀಡಿದ್ದಾರೆ.
5 ವರ್ಷಗಳಲ್ಲಿ 14,613 ರೌಡಿಗಳನ್ನು ರೌಡಿ ಪಟ್ಟಿಗೆ ಸೇರಿಸಲಾಗಿದೆ ಮತ್ತು ಇದೇ ಅವಧಿಯಲ್ಲಿ 27,294 ಮಂದಿಯನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ರೌಡಿಶೀಟ್ ತೆರೆಯುವ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ನಿಯಮವಿದೆ. ರೌಡಿಶೀಟ್ನಿಂದ ಕೈಬಿಡಲು ಪ್ರಮುಖ ಐದು ಅಂಶಗಳನ್ನು ಪರಿಗಣಿಸಲಾಗುತ್ತದೆ. ಆ ರೌಡಿಗೆ 65 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ರೌಡಿಶೀಟರ್ ಮೃತನಾಗಿದ್ದರೆ, ಅಂಗವಿಕಲ ಅಥವಾ ಮಾನಸಿಕ ಅಸ್ವಸ್ಥನಾಗಿದ್ದರೆ, 10 ವರ್ಷ ಯಾವುದೇ ಪ್ರಕರಣದಲ್ಲಿ ಭಾಗಿಯಾಗದೇ ಹೋದರೆ ಪಟ್ಟಿಯಿಂದ ತೆರೆಯಲಾಗುತ್ತದೆ.
ಎಂದು ಗೃಹ ಸಚಿವರು ಉತ್ತರಿಸಿದ್ದಾರೆ.
ರೌಡಿ ರೌಡಿನೇ. ಅದಕ್ಕೆ ಜಾತಿ ಬೇಧ ಇಲ್ಲ. ಜಾತಿ, ಪಕ್ಷದ ಆಧಾರದಲ್ಲಿ ರೌಡಿ ಶೀಟರ್ ಹಾಕಲು ಆಗಲ್ಲ. ಸೂಕ್ಷ್ಮ ವಿಚಾರ ಆಗಿರುವ ಕಾರಣ ರೌಡಿಶೀಟರ್ಗಳ ಪಟ್ಟಿಯನ್ನು ಕೊಡಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ADVERTISEMENT
ADVERTISEMENT