ಕರಾವಳಿ-ಮಲೆನಾಡಲ್ಲಿ ಕುಂಭದ್ರೋಣ ಮಳೆ… ಹಳ್ಳಕೊಳ್ಳಗಳಿಗೆ ಮತ್ತೆ ಜೀವಕಳೆ

ರಾಜ್ಯದ ಕರಾವಳಿ-ಮಲೆನಾಡು ಭಾಗದಲ್ಲಿ ಕುಂಭದ್ರೋಣ ಮಳೆ ಆಗುತ್ತಿದೆ. ನದಿಮೂಲಗಳಿಗೆ ಮತ್ತೆ ಜೀವಕಳೆ ಬರುತ್ತಿದೆ.

ಕರಾವಳಿಯ ಜಿಲ್ಲೆಗಳ ಪೈಕಿ ಉಡುಪಿಯ ಪಡುವಾರಿಯಲ್ಲಿ 203.5ಮಿಲಿಮೀಟರ್, ದಕ್ಷಿಣ ಕನ್ನಡದ ಬಲಂಜಿಯಲ್ಲಿ 187 ಮಿಲಿಮೀಟರ್​, ಉತ್ತರಕನ್ನಡದ ಮುಂಡಳ್ಳಿಯಲ್ಲಿ 184 ಮಿಲಿಮೀಟರ್ ಮಳೆ ಆಗಿದೆ.

ಉಡುಪಿಯ ಸ್ವರ್ಣಾ ನದಿ ತುಂಬಿ ಹರಿಯುತ್ತಿದೆ. ಹಿಡಿಯಡ್ಕದ ಬಜೆ ಡ್ಯಾಂ ಭರ್ತಿಯಾಗಿದೆ

ಕಾರವಾರದಲ್ಲಿ ಕೆಎಸ್​ಆರ್​ಟಿಸಿ ಡಿಪೋಗೆ ನೀರು ನುಗ್ಗಿದೆ. ಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಲೆನಾಡು ಭಾಗದ ಪೈಕಿ ಆಗುಂಬೆಯ ಹೊನ್ನೆತಾಳಿನಲ್ಲಿ 100 ಮಿಲಿಮೀಟರ್, ಮಡಿಕೇರಿಯ ಗಾಳಿಬೀಡಿನಲ್ಲಿ 100 ಮಿಲಿಮೀಟರ್​, ಮೂಡಿಗೆರೆಯ ಬಣಕಲ್​ನಲ್ಲಿ 80 ಮಿಲಿಮೀಟರ್ ಗರಿಷ್ಠ ಮಳೆ ಆಗಿದೆ.

ಪರಿಣಾಮ ಗಾಜನೂರಿನ ತುಂಗಾ ಜಲಾಶಯ ಬಹುತೇಕ ಭರ್ತಿ ಆಗಿದ್ದು, ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಇದೆ.

ಕಾವೇರಿ ಜಲಾನಯನ ಪ್ರದೇಶವಾದ ಕೊಡಗಿನಲ್ಲಿ ಧಾರಕಾರ ಮಳೆ ಆಗುತ್ತಿದೆ. ಭಾಗಮಂಡಲ-ತಲಕಾವೇರಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಗಾಳಿ ಮಳೆಗೆ ಮರಗಳು, ಲೈಟ್​ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಪರಿಣಾಮ ಕೆಆರ್​ಎಸ್​ ಒಳಹರಿವು 1241 ಕ್ಯೂಸೆಕ್​ಗೆ ಹೆಚ್ಚಾಗಿದೆ. ಹಾರಂಗಿ ಒಳಹರಿವು 1518 ಕ್ಯೂಸೆಕ್​ಗೆ ಏರಿದೆ. ಕೇರಳದ ವೈನಾಡಿನಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣ ಕಬಿನಿ ಒಳಹರಿವು 3431 ಕ್ಯೂಸೆಕ್​ಗೆ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here