Karnataka: ಕರ್ನಾಟಕ ರಾಜಕಾರಣ- ಸತತ ಸುಳ್ಳು ಹೇಳಿದ್ದ ಜ್ಯೋತಿಷಿಯ ಸುದ್ದಿ ಪ್ರಕಟಿಸಿ ಹುಬ್ಬೇರಿಸಿದ ಕನ್ನಡದ ಮಾಧ್ಯಮಗಳು

2025ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್​ ಎರಡು ಹೋಳಾಗಿ ಆ ಎರಡು ಗುಂಪಿನಲ್ಲಿ ಒಂದು ಗುಂಪು ಬಿಜೆಪಿ ಮತ್ತು ಜೆಡಿಎಸ್​ ಜೊತೆಗೆ ಸೇರಿಕೊಂಡು ಈಗಿರುವ ಕಾಂಗ್ರೆಸ್​ ಸರ್ಕಾರ ಬದಲಾಗಲಿದೆ

ಎಂದು ಅನಿರುದ್ಧ್​ ಕುಮಾರ್​ ಮಿಶ್ರಾ ಎಂಬ ಜ್ಯೋತಿಷಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದರು.

ಈ ಜ್ಯೋತಿಷಿಯ ಟ್ವೀಟ್​ನ್ನು ನಂಬಿದ ಕನ್ನಡದ ಮಾಧ್ಯಮಗಳು 2025ಕ್ಕೆ ಕರ್ನಾಟಕದಲ್ಲಿ ಬಿಜೆಪಿ+ಜೆಡಿಎಸ್​ ಮತ್ತು ಕಾಂಗ್ರೆಸ್​ ಗುಂಪಿನ ಸರ್ಕಾರ ಬರಲಿದೆ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ ಎಂದು ವರದಿ ಮಾಡಿವೆ.

ಕರ್ನಾಟಕದ ರಾಜಕಾರಣದ ಬಗ್ಗೆ ಸುಳ್ಳು ಭವಿಷ್ಯ ಹೇಳಿದ್ದ ಜ್ಯೋತಿಷಿಯ ಟ್ವೀಟ್​ ನಿಜವಾಗುತ್ತಾ ಎಂದು ವಿಜಯ ಕರ್ನಾಟಕ, ವಿಸ್ತಾರ ನ್ಯೂಸ್ ಮತ್ತು ಒನ್​ಇಂಡಿಯಾ ಕನ್ನಡ ಸುದ್ದಿ ಪ್ರಕಟಿಸಿವೆ.

ಆದರೆ ಈ ಮಾಧ್ಯಮಗಳು ಅನಿರುದ್ಧ್​ ಕುಮಾರ್​ ಮಿಶ್ರಾ ಎಂಬ ಜ್ಯೋತಿಷಿ ಕರ್ನಾಟಕದ ರಾಜಕೀಯದ ಬಗ್ಗೆ ಹೇಳಿದ್ದ ಹಳೆ ಭವಿಷ್ಯವನ್ನು ಕನಿಷ್ಠ ಪಕ್ಷ ಪರಿಶೀಲಿಸಲು ಕೂಡಾ ಪ್ರಯತ್ನಿಸಲಿಲ್ಲ.

ಖ್ಯಾತ ಜ್ಯೋತಿಷಿ ಹೇಳಿದ ಸುಳ್ಳು 1:

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆದ ಬಳಿಕ ಏಪ್ರಿಲ್​ 23ರಂದು ಟ್ವೀಟಿಸಿದ್ದ ಈ ಜ್ಯೋತಿಷಿ ಕರ್ನಾಟಕದಲ್ಲಿ ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ ಮುಂದುವರೆಯಲಿದೆ ಎಂದು ಭವಿಷ್ಯ ನುಡಿದಿದ್ದರು.

ಖ್ಯಾತ ಜ್ಯೋತಿಷಿ ಹೇಳಿದ ಸುಳ್ಳು 2

ಹಿಮಾಚಲ ಪ್ರದೇಶ ಮತ್ತು ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆ ಬಗ್ಗೆ ಈ ಜ್ಯೋತಿಷಿ ಸುಳ್ಳು ಭವಿಷ್ಯ ನುಡಿದಿದ್ದರು. ಹಿಮಾಚಲ ಪ್ರದೇಶ ಮತ್ತು ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಡಿಸೆಂಬರ್​ 4ರಂದು ಭವಿಷ್ಯ ನುಡಿದಿದ್ದರು. ಆದರೆ ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್​ ಗೆದ್ದರೆ, ದೆಹಲಿ ಪಾಲಿಕೆಯಲ್ಲಿ ಆಮ್​ ಆದ್ಮಿ ಪಕ್ಷದ ಅಧಿಕಾರಕ್ಕೆ ಬಂತು.

ಖ್ಯಾತ ಜ್ಯೋತಿಷಿ ಹೇಳಿದ ಸುಳ್ಳು 3:

ಕಳೆದ ವರ್ಷ ಅಕ್ಟೋಬರ್​ 19ರಂದು ಟ್ವೀಟಿಸಿದ್ದ ಇದೇ ಜ್ಯೋತಿಷಿ ‘ಮಾರ್ಚ್​ 2023ರೊಳಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸಿ ಇನ್ನೊಬ್ಬರನ್ನು ಸಿಎಂ ಮಾಡ್ತಾರೆ ಮತ್ತು ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ’ ಎಂದು ಸುಳ್ಳು ಭವಿಷ್ಯ ಹೇಳಿದ್ದರು.

LEAVE A REPLY

Please enter your comment!
Please enter your name here