Karnataka Lokayukta: ಲೋಕಾಯಕ್ತ ಹೆಸರಲ್ಲಿ ಕೃಷಿ ಅಧಿಕಾರಿಗೆ ಲಂಚಕ್ಕೆ ಬೇಡಿಕೆ, FIR ದಾಖಲು

ಲೋಕಾಯುಕ್ತದ ಹೆಸರು ಹೇಳಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಮಂಡ್ಯ ಜಿಲ್ಲೆಯ ಕೆ ಆರ್​ ಪೇಟೆ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ಗೌರಮ್ಮ ಅವರು ಕೊಟ್ಟ ದೂರಿನಡಿಯಲ್ಲಿ ಕೆ ಆರ್​ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸಾದ್​ ಎಂಬಾತನ ವಿರುದ್ಧ ಐಪಿಸಿ ಕಲಂ 420, 385, 511ರಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಶುಕ್ರವಾರ ಅಂದರೆ ಆಗಸ್ಟ್​ 7ರಂದು ಬೆಳಗ್ಗೆ 11 ಗಂಟೆಗೆ ಪಿ ಪ್ರಸಾದ್​ ಎಂಬ ವ್ಯಕ್ತಿ 7975798293 ಮೊಬೈಲ್​ ನಂಬರ್​ನಿಂದ ಸಹಾಯಕ ಕೃಷಿ ಅಧಿಕಾರಿ ಅವರ ಸಂಖ್ಯೆಗೆ ಕರೆ ಮಾಡಿ ತಾವು ಸಚಿವರ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಗೌರಮ್ಮ ಅವರ ವೈಯಕ್ತಿಕ ಮೊಬೈಲ್​ ನಂಬರ್​ನ್ನು ಪಡೆದುಕೊಂಡಿದ್ದರು.

ಇದಾದ ಬಳಿಕ ಅವತ್ತೇ ಸಂಜೆ 7 ಗಂಟೆ 24 ನಿಮಿಷಕ್ಕೆ ಅದೇ ನಂಬರ್​ನಿಂದ ಗೌರಮ್ಮ ಅವರ ವೈಯಕ್ತಿಕ ನಂಬರ್​ಗೆ ಕರೆ ಮಾಡಿ ತಾವು ಲೋಕಾಯುಕ್ತ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿಯೂ, 12 ವರ್ಷಗಳಿಂದ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿಯೂ ಹೇಳಿ 5 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇದಾದ ಬಳಿಕ ಆಗಸ್ಟ್​ 9 ಮತ್ತು 10ರಂದು ನಿರಂತರವಾಗಿ ಅದೇ ನಂಬರ್​ನಿಂದ ಕರೆ ಬಂದಿತ್ತು. ಶುಕ್ರವಾರದೊಳಗೆ ಅಂದರೆ ಆಗಸ್ಟ್​​ 11ರೊಳಗೆ ಒಂದೂವರೆ ಲಕ್ಷ ರೂಪಾಯಿ ನೀಡುವಂತೆ ನೇಹಾ ಎಂಎಸ್​ ಎಂಬ ಮಹಿಳೆಯ ದೂರವಾಣಿ ಸಂಖ್ಯೆ 9380659775 ಫೋನ್​ ಪೇ ನಂಬರ್​ ಮತ್ತು ನೇಹಾ ಎಂಬಾಕೆಯ ಕರ್ನಾಟಕ ಬ್ಯಾಂಕ್​ನ ಖಾತೆಯ ಸಂಖ್ಯೆಯನ್ನೂ ಕೊಟ್ಟು ಹಣ ಜಮೆ ಮಾಡುವಂತೆ ಬೆದರಿಸಿದ್ದರು

ಎಂದು ಸಹಾಯಕ ಕೃಷಿ ಅಧಿಕಾರಿ ಗೌರಮ್ಮ ತಾವು ಕೊಟ್ಟ ದೂರಿನಲ್ಲಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here