ADVERTISEMENT
ಕರ್ನಾಟಕದಲ್ಲಿ ದಲಿತ (Dalit) ಸಮುದಾಯದ ವಿದ್ಯಾರ್ಥಿಗಳಿಗೆ ಬಿಜೆಪಿ (BJP) ಸರ್ಕಾರ ವೈದಿಕ ಗಣಿತ (ವೇದ ಗಣಿತ) (Vedic Maths) ಕಲಿಸಲು ಹೊರಟಿದೆ.
ದಲಿತ ಸಮುದಾಯದ 5 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವೈದಿಕ ಗಣಿತ ಕಲಿಸುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (School Education and Literacy Department) ಟಿಪ್ಪಣಿ ಹೊರಡಿಸಿದೆ ಎಂದು ಪ್ರಮುಖ ಇಂಗ್ಲೀಷ್ ದೈನಿಕ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು (Hiriyuru) ತಾಲೂಕಿನ ಎವಿಎಂ ಅಕಾಡೆಮಿ (AVM Academy) ಎಂಬ ಖಾಸಗಿ ಸಂಸ್ಥೆ ದಲಿತ ವಿದ್ಯಾರ್ಥಿಗಳಿಗೆ ವೈದಿಕ ಗಣಿತ ಕಲಿಸುವ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಿಟ್ಟಿದ್ದ ಪ್ರಸ್ತಾಪಕ್ಕೆ ಇಲಾಖೆ ಒಪ್ಪಿಗೆ ನೀಡಿದೆ.
ದಲಿತ ಅಭಿವೃದ್ಧಿ ಅನುದಾನವೇ ಬಳಕೆ:
ವಿಚಿತ್ರ ಎಂದರೆ ಎಸ್ಸಿ/ಎಸ್ಟಿ (SC/ST) ಸಮುದಾಯದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತಿಗಳಿಗೆ ನೀಡಲಾಗುವ ಅನುದಾನದಲ್ಲಿ ಶೇಕಡಾ 25ರಷ್ಟನ್ನು ದಲಿತ ವಿದ್ಯಾರ್ಥಿಗಳಿಗೆ ವೈದಿಕ ಗಣಿತ (ವೇದ ಗಣಿತ) ಕಲಿಸಲು ಪ್ರತಿ ಜಿಲ್ಲೆಯಲ್ಲೂ ಬಳಸಲಾಗುತ್ತದೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.
ಈಗಾಗಲೇ ಅಕಾಡೆಮಿ ವೇದ ಗಣಿತ ಸಂಬಂಧ ಶಿಕ್ಷಕರಿಗೆ ತರಬೇತಿ ನೀಡಲು ಶುರು ಮಾಡಿದೆ. ಪ್ರತಿ ಶನಿವಾರ ಮತ್ತು ಭಾನುವಾರದಂದು ಎರಡು ಗಂಟೆ, ಅಂದರೆ ಒಟ್ಟು 16 ವಾರ ವೈದಿಕ ಗಣಿತ (ವೇದ ಗಣಿತ) ಶಿಕ್ಷಣವನ್ನು ದಲಿತ ವಿದ್ಯಾರ್ಥಿಗಳಿಗೆ ಎವಿಎಂ ಅಕಾಡೆಮಿ ನೀಡಲಿದೆ.
ADVERTISEMENT