ಗೃಹ ಜ್ಯೋತಿ ಯೋಜನೆಯಡಿಲ್ಲಿ ಅರ್ಜಿ ಸಲ್ಲಿಕೆಗೆ ರಾಜ್ಯ ಸರ್ಕಾರ ಅಂತಿಮ ದಿನಾಂಕ ಘೋಷಿಸಿದೆ.
ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯಲು ಜುಲೈ 27ರೊಳಗೆ ಅಂದರೆ ಇದೇ ತಿಂಗಳಲ್ಲೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು.
ಗೃಹ ಜ್ಯೋತಿ ಯೋಜನೆಗೆ ಕಡೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಆದರೆ ಈಗ ಕಡೆಯ ದಿನಾಂಕ ನಿಗದಿಪಡಿಸಿದ್ದೇವೆ. ಜುಲೈ 27 ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಬುಧವಾರ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಸರ್ಕಾರದ ಅಧಿಕೃತ ಅಂಕಿ ಅಂಶದ ಪ್ರಕಾರ ಜುಲೈ 11ರವರೆಗೆ 1 ಕೋಟಿ 6 ಲಕ್ಷದ 35 ಸಾವಿರ ಮಂದಿ ಉಚಿತ ವಿದ್ಯುತ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಬೆಸ್ಕಾಂ: 43 ಲಕ್ಷದ 46 ಸಾವಿರ ಕುಟುಂಬಗಳಿಂದ ಅರ್ಜಿ
ಸಿಇಎಸ್ಸಿ: 16 ಲಕ್ಷದ 9 ಸಾವಿರ ಕುಟುಂಬಗಳಿಂದ ಅರ್ಜಿ
ಜೆಸ್ಕಾಂ: 11 ಲಕ್ಷದ 39 ಸಾವಿರ ಕುಟುಂಬಗಳಿಂದ ಅರ್ಜಿ
ಹೆಸ್ಕಾಂ: 22 ಲಕ್ಷದ 78 ಸಾವಿರ ಕುಟುಂಬಗಳಿಂದ ಅರ್ಜಿ
ಹೆಚ್ಆರ್ಇಸಿಎಸ್: 55 ಸಾವಿರ ಕುಟುಂಬಗಳಿಂದ ಅರ್ಜಿ
ಮೆಸ್ಕಾಂ: 12 ಲಕ್ಷದ 6 ಸಾವಿರ ಕುಟುಂಬಗಳಿಂದ ಅರ್ಜಿ
ADVERTISEMENT
ADVERTISEMENT