ಪ್ರಧಾನಿ ಮೋದಿ ಬಗ್ಗೆ ಹೊಗಳಿ ಬರೆದಿದ್ದ ಪುಸ್ತಕ ಬಿಡುಗಡೆಗೆ 35 ಲಕ್ಷ ಖರ್ಚು – ಕರ್ನಾಟಕ ಸರ್ಕಾರದಿಂದಲೇ ಖರ್ಚು

ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಬರೆಯಲಾಗಿದ್ದ ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರವೇ ತನ್ನ ಬೊಕ್ಕಸದಿಂದ ಬರೋಬ್ಬರೀ 35 ಲಕ್ಷ ರೂಪಾಯಿ ಖರ್ಚು ಮಾಡಿದೆ.
ಈ ಬಗ್ಗೆ ದಿ ಫೈಲ್​ ವರದಿ ಮಾಡಿದೆ.
ದಿ ಫೈಲ್​ ವರದಿ ಪ್ರಕಾರ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 27ರಂದು ಪ್ರಧಾನಿ ಮೋದಿ ಬಗ್ಗೆ ಬರೆಯಲಾಗಿದ್ದ ಮೋದಿ @25 ಪುಸ್ತಕದ ಬಿಡುಗಡೆ ಕಾರ್ಯಕ್ರಮ ಮತ್ತು ಕಾರ್ಯಕ್ರಮದ ಪ್ರಸಾರ ಮತ್ತು ಪ್ರಚಾರಕ್ಕೆ ಸರ್ಕಾರ ಜನಸಾಮಾನ್ಯರ ತೆರಿಗೆ ಹಣವನ್ನು ಖರ್ಚು ಮಾಡಿದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿ ಪುಸ್ತಕ ಬಿಡುಗಡೆ ಮಾಡಿದ್ದರು.
ಗುಜರಾತ್​ ಸಿಎಂ ಆಗಿದ್ದಾಗಿನಿಂದ ಹಿಡಿದು ಮೋದಿಯವರ 25 ವರ್ಷಗಳ ಆಡಳಿತ ವೈಖರಿ ಬಗ್ಗೆ ಬಿಜೆಪಿ ನಾಯಕ ಅಮಿತ್​ ಶಾ, ಸುಧಾಮೂರ್ತಿ ಒಳಗೊಂಡಂತೆ ಹಲವು ಹೊಗಳಿ ಲೇಖನಗಳನ್ನು ಬರೆದಿದ್ದ ಪುಸ್ತಕ ಇದಾಗಿದೆ.
ವೇದಿಕೆಯ ಅಲಂಕಾರಕ್ಕೆ 6 ಲಕ್ಷದ 39 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಆ ದಿನದ ಕಾರ್ಯಕ್ರಮಕ್ಕೆ ಜಿಎಸ್​ಟಿ ತೆರಿಗೆ ಒಳಗೊಂಡು 24 ಲಕ್ಷದ 67 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆರ್​ಟಿಐ ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರು ಪಡೆದಿರುವ ಮಾಹಿತಿಯನ್ನು ಉಲ್ಲೇಖಿಸಿ ದಿ ಫೈಲ್​ ವರದಿ ಮಾಡಿದೆ.

LEAVE A REPLY

Please enter your comment!
Please enter your name here