ಕರ್ನಾಟಕದಲ್ಲಿ ಒಂದು ವಾರದಲ್ಲಿ 1 ಕೋಟಿ ಸಸಿಗಳನ್ನು ನೆಡಲು ಅರಣ್ಯ ಇಲಾಖೆ ತೀರ್ಮಾನಿಸಿದೆ.
ಜುಲೈ1ರಿಂದ ಜುಲೈ 7ರವರೆಗೆ 1 ಕೋಟಿ ಗಿಡ ನೆಡುವ ಅಭಿಯಾನ ನಡೆಯಲಿದೆ.
ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇವತ್ತು ಬೆಂಗಳೂರಿಲ್ಲಿರುವ ವಿಕಾಸಸೌಧದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಸದ್ಯ ಅರಣ್ಯ ಪ್ರಮಾಣ ಶೇಕಡಾ 20.19ರಷ್ಟಿದ್ದು, ಇದನ್ನು ಶೇಕಡಾ 33ಕ್ಕೆ ಹೆಚ್ಚಿಸುವ ಸಲುವಾಗಿ ರಾಜ್ಯಾದ್ಯಂತ ಕೋಟಿ ಗಿಡ ನೆಡುವ ವನಮಹೋತ್ಸವ ಅಭಿಯಾನಕ್ಕೆ ತೀರ್ಮಾನಿಸಲಾಗಿದೆ.
ADVERTISEMENT
ADVERTISEMENT