ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಯ್ತಾ..? – ಸತ್ಯಾಂಶ ಏನು..?

ಈ ವರ್ಷ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಆಗಿದ್ಯಾ..? ವಿಧಾನಸಭಾ ಚುನಾವಣೆ ಘೋಷಣೆ ಆಗಿದೆ ಮತ್ತು ಮತದಾನ ಹಾಗೂ ಫಲಿತಾಂಶದ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ವೊಂದು ಹಬ್ಬುತ್ತಿದೆ.

ಆ ಪೋಸ್ಟ್​ನಲ್ಲಿ ಏನಿದೆ..?

ಕರ್ನಾಟಕ ವಿಧಾನಸೌಧದ ಚಿತ್ರವಿರುವ ಆ ಪೋಸ್ಟ್​ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ -2023 ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಚುನಾವಣಾ ವೇಳಾಪಟ್ಟಿ ಎಂದೂ ನಮೂದಿಸಲಾಗಿದೆ.

ಅದರ ಕೆಳಗೆ ಚುನಾವಣಾ ಪ್ರಕ್ರಿಯೆಗಳ ದಿನಾಂಕವನ್ನು ಮುದ್ರಿಸಲಾಗಿದೆ.

ಮಾರ್ಚ್​ 27: ನೀತಿ ಸಂಹಿತೆ ಜಾರಿ

ಏಪ್ರಿಲ್​ 17: ಚುನಾವಣಾ ಅಧಿಸೂಚನೆ ಪ್ರಕಟ

ಏಪ್ರಿಲ್​ 24: ನಾಮಪತ್ರ ಸಲ್ಲಿಸಲು ಕೊನೆಯ ದಿನ

ಏಪ್ರಿಲ್​  25: ನಾಮಪತ್ರಗಳ ಪರಿಶೀಲನೆ

ಏಪ್ರಿಲ್​ 27: ನಾಮಪತ್ರ ಹಿಂಪಡೆಯಲು ಕೊನೆಯ ದಿನ

ಮೇ 12: ಮತದಾನ

ಮೇ 15: ಮತ ಎಣಿಕೆ

ಈ ಪೋಸ್ಟ್​ನಲ್ಲಿ ಮತದಾನದ ದಿನ ಮತ್ತು ಮತ ಎಣಿಕೆಯ ದಿನಾಂಕದ ಮಾಹಿತಿ ಕಳೆದ ಬಾರಿ ಅಂದರೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣಾ ವೇಳಾಪಟ್ಟಿಯದ್ದು.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯ ಆಗಿದೆ ಎಂಬ ಸುಳ್ಳು ಸುದ್ದಿ ಇರುವ ಪೋಸ್ಟರ್​
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯ ಆಗಿದೆ ಎಂಬ ಸುಳ್ಳು ಸುದ್ದಿ ಇರುವ ಪೋಸ್ಟರ್​

ಸತ್ಯಾಂಶ ಏನು..?

ಈ ವರ್ಷ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಇನ್ನೂ ವೇಳಾಪಟ್ಟಿ ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಸುಳ್ಳು.

ಫೆಬ್ರವರಿ 17ರಂದು ಸಿಎಂ ಬಸವರಾಜ್​ ಬೊಮ್ಮಾಯಿ ಸರ್ಕಾರದ ಬಜೆಟ್​ ಮಂಡನೆ ಇರುವ ಕಾರಣ ಚುನಾವಣಾ ಘೋಷಣೆ ಏನಿದ್ದರೂ ಬಜೆಟ್​ ಮಂಡನೆ ಬಳಿಕವಷ್ಟೇ.

ಜೊತೆಗೆ ಮಾರ್ಚ್​​ 31ರಿಂದ ಏಪ್ರಿಲ್​ 15ವರೆಗೆ ಕರ್ನಾಟಕದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವ ಕಾರಣ ಈ ಅವಧಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ.

 

LEAVE A REPLY

Please enter your comment!
Please enter your name here