ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರುವಾಗುತ್ತಿರುವಂತೆ Small Box India ತನ್ನ ಎರಡನೇ ಚುನಾವಣಾಪೂರ್ವ ಸಮೀಕ್ಷೆಯನ್ನು ಪ್ರಕಟಿಸಿದೆ.
Small Box India ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.
ಜೆಡಿಎಸ್ಗೆ 2018ರ ಫಲಿತಾಂಶಕ್ಕೆ ಹೋಲಿಸಿದರೆ ಅರ್ಧಕ್ಕಿಂತ ಹೆಚ್ಚು ಸೀಟುಗಳ ನಷ್ಟ ಆಗಲಿದೆ.
ಆಡಳಿತ ಪಕ್ಷ ಬಿಜೆಪಿಗೂ 40ಕ್ಕಿಂತ ಅಧಿಕ ಸೀಟುಗಳ ನಷ್ಟ ಆಗಲಿದೆ ಎಂದು ಸಮೀಕ್ಷೆ ಹೇಳಿದೆ.
Small Box India ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ 122ರಿಂದ 136 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ 80 ಸೀಟುಗಳನ್ನು ಗೆದ್ದುಕೊಂಡಿತ್ತು. ಅಂದರೆ ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ಗೆ 42ರಿಂದ 56 ಸೀಟುಗಳು ಹೆಚ್ಚಳ ಆಗಬಹುದು ಎಂದು ಸಮೀಕ್ಷೆ ಊಹಿಸಿದೆ.
ಆಡಳಿತ ಪಕ್ಷ ಬಿಜೆಪಿಗೆ 72ರಿಂದ 80 ಸೀಟುಗಳು ಸಿಗಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಅಂದರೆ 2018ರ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ 32ರಿಂದ 24ರಷ್ಟು ಸೀಟು ನಷ್ಟ ಆಗಲಿದೆ. ಈಗಿನ ಬಲಾಬಲಕ್ಕೆ ಹೋಲಿಸಿದರೆ 40ಕ್ಕೂ ಅಧಿಕ ಸೀಟು ಬಿಜೆಪಿಗೆ ಖೋತಾ ಆಗಲಿದೆ.
ಜೆಡಿಎಸ್ಗೆ 12 ರಿಂದ 14 ಸೀಟು ಸಿಗಬಹುದು ಎಂದು ಸಮೀಕ್ಷೆ ಅಂದಾಜು ಮಾಡಿದೆ. ಅಂದರೆ ಜೆಡಿಎಸ್ಗೆ ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ 25ರಿಂದ 23 ಸೀಟುಗಳು ನಷ್ಟ ಆಗಬಹುದು.
ಇತರರು 2ರಿಂದ 3 ಸೀಟುಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜು ಮಾಡಿದೆ.