ಕರ್ನಾಟಕದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ನಮ್ಮ ನಾಡಿನ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಅವರ ಕುರಿತ ಪಠ್ಯ, ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ಕುರಿತ ಪಠ್ಯ ಮತ್ತು ಕನ್ನಡ ಮೊದಲ ಪಠ್ಯವೆಂದೇ ಪರಿಗಣಿಸಲಾಗಿರುವ ಜೈನ ಧರ್ಮದ ಕುರಿತ ಶಿವಕೋಟ್ಯಾಚಾರ್ಯ ಅವರು ಬರೆದಿರುವ ವಡ್ಡಾರಾಧನೆಯ ಸುಕುಮಾರಸ್ವಾಮಿ ಕಥೆಯನ್ನು ಶಾಲಾ ಪಠ್ಯ ಪುಸ್ತಕದಿಂದ ತೆಗೆದುಹಾಕಿದೆ.
ಈ ಪಠ್ಯಗಳನ್ನು ತೆಗೆದು ಹಾಕಿ ಬಿಜೆಪಿ ಮಾತೃಸಂಸ್ಥೆ ಆಗಿರುವ ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಗಡೆವಾರ್ ಅವರ ಪಠ್ಯವನ್ನು ಸೇರಿಸಿದೆ.
ರಾಷ್ಟçಕವಿ ಕುವೆಂಪು ಮತ್ತು ನಾಡ ಧ್ವಜದ ಬಗ್ಗೆ ಈ ಹಿಂದೆ ಅವಹೇಳನ ಮಾಡಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ಈ ಕನ್ನಡ ವಿರೋಧಿ ನಿರ್ಧಾರವನ್ನು ಕೈಗೊಂಡಿದೆ. ಆ ಮೂಲಕ ಬೊಮ್ಮಾಯಿ ಸರ್ಕಾರ ಶಾಲಾ ಪಠ್ಯದಲ್ಲಿ ಆರ್ಎಸ್ಎಸ್ ಅಜೆಂಡಾ ತರುವ ದುಸ್ಸಾಹಸಕ್ಕೆ ಕೈ ಹಾಕಿದೆ.
ಬೊಮ್ಮಾಯಿ ಸರ್ಕಾರದ ಕ್ರಮಕ್ಕೆ ವ್ಯಾಪಕ ಟೀಕೆ ಕೇಳಿಬಂದಿದೆ.
ಭಗತ್ ಸಿಂಗ್ ಅಂತವರನ್ನೇ ಪಠ್ಯದಿಂದ ತೆಗೆದು ಹಾಕಿ, ವೈಚಾರಿಕತೆಗೆ ಇತಿಶ್ರೀ ಹಾಡಿ @BJP4Karnataka ಪಕ್ಷವು ಯಾವ ದೇಶಪ್ರೇಮವನ್ನು ಪ್ರದರ್ಶಿಸಲು ಹೊರಟಿದೆ?
3/3
— Dr H C Mahadevappa(Buddha Basava Ambedkar Parivar) (@CMahadevappa) May 17, 2022
ಪಠ್ಯವನ್ನು ವಿಕೃತಿಗೊಳಿಸುತ್ತಿರುವುದು ಎಂದರೆ, ಕನ್ನಡ ಆಸ್ಮಿತೆಯನ್ನು ಹತ್ತಿಕ್ಕುವ ಪಾತಕ ಯತ್ನ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು, ಪ್ರಶ್ನಿಸಬೇಕು. ಹೋರಾಟಕ್ಕೂ ಇಳಿಯಬೇಕು.
"ಅಯ್ಯೋ.. ಕರ್ನಾಟಕ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ!!" 7/7#ಪಠ್ಯಪುಸ್ತಕ_ಪಕ್ಷಪುಸ್ತಕ— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) May 17, 2022