ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗೀತಾ, ದೊರೆಸಾನಿ ಸೀರಿಯಲ್ ಗಳಲ್ಲಿ ನಟಿಸಿದ್ದ ಯುವ ನಟಿ ಚೇತನಾ ರಾಜ್ ಅಕಾಲಿಕ ನಿಧನ ಹೊಂದಿದ್ದಾರೆ.
ಕೊಬ್ಬು ತೆಗೆಸುವ ಶಸ್ತ್ರಚಿಕಿತ್ಸೆಗಾಗಿ
ನಿನ್ನೆ ಬೆಳಗ್ಗೆ ಬೆಂಗಳೂರಿನ ಡಾ. ಶೆಟ್ಟಿಸ್ ಕಸ್ಮೆಟಿಕ್ಸ್ ಅಂಡ್ ಸರ್ಜರಿ ಆಸ್ಪತ್ರೆಗೆ ದಾಖಲಾಗಿದ್ದ 21 ವರ್ಷದ ನಟಿ ಚೇತನಾ ರಾಜ್, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಈ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ಒಲವಿನ ನಿಲ್ದಾಣ ಎಂಬ ಸೀರಿಯಲ್ ನಲ್ಲಿ ಮೇನ್ ರೋಲ್ ಸಿಕ್ಕಿದ್ದ ಕಾರಣ ಒಂದಿಷ್ಟು ಸಣ್ಣ ಆಗಲು ಚೇತನಾ ರಾಜ್ ಫ್ಯಾಟ್ ಚಿಕಿತ್ಸೆಗೆ ಒಳಪಟ್ಟಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ಚೇತನಾ ರಾಜ್ ನಟಿಸಿದ್ದರು.