ಧಾರವಾಹಿ ನಿರ್ಮಾಪಕನಿಂದ ಹಣಪಡೆದು ವಂಚನೆ ಮಾಡಿರುವ ಆರೋಪದ ಕಮಲಿ ಸೀರಿಯಲ್ ನಿರ್ದೇಶಕ ಅರವಿಂದ್ ಕೌಶಿಕ್ ರನ್ನು ಬೆಂಗಳೂರಿನ ವೈಯ್ಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ಕನ್ನಡ ಕಿರುತೆರೆಯಲ್ಲಿ ಕಮಲಿ ಧಾರವಾಹಿಯನ್ನು ಅರವಿಂದ್ ಕೌಶಿಕ್ ನಿರ್ದೇಶನ ಮಾಡಿದ್ದರು. ಈ ಸಂದರ್ಭದಲ್ಲಿ ಅರವಿಂದ್ ಕೌಶಿಕ್, ಸಹ ನಿರ್ಮಾಪಕ ರೋಹಿತ್ ಕಡೆಯಿಂದ 73ಲಕ್ಷ ಪಡೆದಿದ್ದರು.
ಧಾರವಾಹಿ ಯಶಸ್ಸು ಕಂಡ ನಂತರವೂ ರೋಹಿತ್ ಗೆ ಹಣ ಹಿಂತಿರುಗಿಸದೆ, ಲಾಭದ ಪಾಲನ್ನು ತೆರೆಕಂಡ ನಂತರ ಹಣ ಹಿಂತಿರುಗಿಸದೇ ಲಾಭಾಂಶವನ್ನು ನೀಡದೇ ವಂಚಸಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಸಹ ನಿರ್ಮಾಪಕ ರೋಹಿತ್ ವೈಯ್ಯಾಲಿಕಾವಲ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ದ 506 ಹಾಗೂ 420 ಅಡಿ ಪ್ರಕರಣ ಮಾಡಿಕೊಂಡ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತ ನಿರ್ದೇಶಕ ಅರವಿಂದ್ ಕೌಶಿಕ್ ಸ್ಯಾಂಡಲ್ವುಡ್ ನಲ್ಲಿ ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ, ಶಾರ್ದೂಲ್ , ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ.