‘ನಿನ್ನ ಸನಿಹಕೆ’ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ಧನ್ಯ ರಾಮ್ಕುಮಾರ್. ಮೊದಲ ಚಿತ್ರದಲ್ಲೇ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಇದೀಗ ಡಾ.ರಾಜ್ಕುಮಾರ್ ಅವರ ಹುಟ್ಟುಹಬ್ಬದಂದೇ ಡಾ.ರಾಜ್ಕುಮಾರ್ ಅವರ ಅಳಿಯ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ಕುಮಾರ್ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ವಿಕ್ಕಿ ವರುಣ್ ನಿರ್ದೇಶಿಸಿ, ನಟಿಸುತ್ತಿರುವ `ಕಾಲಾಪತ್ಥರ್’ ಚಿತ್ರದಲ್ಲಿ ಧನ್ಯ ರಾಮ್ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ವರನಟ ಡಾ.ರಾಜ್ಕುಮಾರ್ ಅವರ ಹುಟ್ಟುಹಬ್ಬದ ಶುಭಸಂದರ್ಭದಲ್ಲಿ ನಟಿ ಧನ್ಯ ಅವರ ಎರಡನೇ ಚಿತ್ರ `ಕಾಲಾಪತ್ಥರ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.
ಶ್ರೀಮತಿ ಗೀತಾ ಶಿವರಾಜ್ಕುಮಾರ್ ಅರ್ಪಣೆಯಲ್ಲಿ, ಭುವನ್ ಮೂವೀಸ್ ಪರ್ಪಲ್ ಫೆದರ್ಸ್ ನಿರ್ಮಾಣದಲ್ಲಿ `ಕಾಲಾಪತ್ಥರ್’ ಸಿನಿಮಾ ಮೂಡಿ ಬಂದಿದ್ದು, ಡಾ.ರಾಜ್ಕುಮಾರ್ ಹುಟ್ಟುಹಬ್ಬದಂದು ನಾಯಕಿ ಧನ್ಯ ಅವರ ಗಂಗಾ ಪಾತ್ರದ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಹಳ್ಳಿ ಹುಡುಗಿಯ ಗಂಗಾ ಪಾತ್ರದಲ್ಲಿ ಧನ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಕಾಲಾಪತ್ಥರ್ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇದೇ ಜೂನ್ಗೆ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.