ತಮ್ಮ ಮತ್ತು ಪತಿ ಕೆ ಎಲ್ ರಾಹುಲ್ (K L Rahul) ಅವರ ವಿರುದ್ಧದ ಹಬ್ಬಿದ್ದ ಸುಳ್ಳು ಸುದ್ದಿಗೆ ನಟಿ ಅತಿಯಾ ಶೆಟ್ಟಿ (Athiya Shetty) ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಅತಿಯಾ ಶೆಟ್ಟಿ ಅವರು ತಮ್ಮ ಇನ್ಸ್ಟ್ರಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನಾನು ಸಾಮಾನ್ಯವಾಗಿ ಸುಮ್ಮನಿರಲು ಮತ್ತು ಪ್ರತಿಕ್ರಿಯಿಸದೇ ಇರಲು ಬಯಸುತ್ತೇನೆ, ಆದರೆ ಕೆಲವೊಂದು ಸಲ ನಿಮ್ಮ ಪರವಾಗಿ ನೀವೇ ನಿಲ್ಲಬೇಕಾಗುತ್ತದೆ. ರಾಹುಲ್, ನಾನು ಮತ್ತು ಸ್ನೇಹಿತರು ಯಾವಾಗಲೂ ಹೋಗುವ ಕಡೆ ಹೋಗಿದ್ವಿ, ಎಲ್ಲರೂ ಹೋಗುವಂತೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದನ್ನು ನಿಲ್ಲಿಸಿ ಮತ್ತು ವರದಿಗೂ ಮೊದಲು ಸತ್ಯಾಂಶ ತಿಳಿದುಕೊಳ್ಳಿ. ಶಾಂತಿ ಮತ್ತು ಪ್ರೀತಿ