ಕರ್ನಾಟಕ ಮೂಲದ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಸರ್ವಸಮ್ಮತ ಅಯೋಧ್ಯೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ನ ಸಂವಿಧಾನಿಕ ಪೀಠದಲ್ಲಿ ಅಬ್ದುಲ್ ನಜೀರ್ ಅವರು ಕೂಡಾ ಇದ್ದರು.
ಅಬ್ದುಲ್ ನಜೀರ್ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಬೆಳುವಾಯಿ ಮೂಲದದವರು.
ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ಬಳಿ 2019ರವರೆಗೆ ಪಾಸ್ಪೋರ್ಟ್ ಇರಲಿಲ್ಲವಂತೆ. ಅಂದರೆ ಇವರು ವಿದೇಶ ಪ್ರವಾಸ ಕೈಗೊಂಡಿದ್ದೇ 2019ರಲ್ಲಿ. ಅಲ್ಲಿಯವರೆಗೆ ಇವರ ಬಳಿ ಇದ್ದ ಗುರುತಿನ ದಾಖಲೆಗಳೆಂದರೆ ಡಿಎಲ್ ಮತ್ತು ಜಡ್ಜ್ ಐಡಿ. ಇವರು ಭೇಟಿ ಕೊಟ್ಟ ಮೊದಲ ವಿದೇಶಿ ರಾಷ್ಟ್ರ ರಷ್ಯಾ.
ಇವರ ಈ ಸರಳತೆಯನ್ನು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಹಾಡಿಹೊಗಳಿದ್ದರು.
ಮಹಾರಾಷ್ಟ್ರ ರಾಜ್ಯಪಾಲರ ಬದಲಾವಣೆ:
12 ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಸ ರಾಜ್ಯಪಾಲರನ್ನು ನೇಮಿಸಿದೆ.
ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ವಿಕಾಸ ಮೈತ್ರಿಕೂಟ ಸರ್ಕಾರಕ್ಕೆ ಸವಾಲಾಗಿದ್ದ ರಾಜ್ಯಪಾಲ ಬಿ ಎಸ್ ಕೋಶಿಯಾರಿ ಅವರ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ.
ಮಹಾರಾಷ್ಟ್ರಕ್ಕೆ ಜಾರ್ಖಂಡ್ ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಅವರನ್ನು ವರ್ಗಾಯಿಸಿ ರಾಷ್ಟ್ರಪತಿಗಳ ಕಾರ್ಯಾಲಯ ಆದೇಶಿಸಿದೆ.
ಹೊಸ ರಾಜ್ಯಪಾಲರು:
ಅಸ್ಸಾಂ:
ಗುಲಾಬ್ ಚಂದ್ ಕಟಾರಿಯಾ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಇವರು ರಾಜಸ್ಥಾನ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದರು. ಮಾಜಿ ಸಿಎಂ ವಸುಂಧರಾ ರಾಜೆ ಅವರ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿದ್ದ ಕಟಾರಿಯಾ ಅವರನ್ನ ರಾಜ್ಯಪಾಲರನ್ನಾಗಿ ನೇಮಿಸುವ ಮೂಲಕ ರಾಜಸ್ಥಾನದಲ್ಲಿ ಬಿಜೆಪಿ ವಸುಂಧರಾ ರಾಜೆ ಅವರ ಬೆನ್ನಿಗೆ ನಿಂತಿದ್ದೇವೆ ಎಂಬ ಸಂದೇಶ ರವಾನಿಸಿದೆ.
ಅರುಣಾಚಲಪ್ರದೇಶ: ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯ್ಕ್
ಸಿಕ್ಕಿಂ: ಲಕ್ಷ್ಮಣ್ ಪ್ರಸಾದ್ ಆಚಾರ್ಯ
ಜಾರ್ಖಂಡ್: ಸಿ ಪಿ ರಾಧಾಕೃಷ್ಣನ್
ಹಿಮಾಚಲಪ್ರದೇಶ: ಶಿವಪ್ರತಾಪ್ ಶುಕ್ಲಾ
ಛತ್ತೀಸ್ಗಢ: ಬಿಸ್ವಾ ಭೂಷಣ್ ಹರಿಶ್ಚಂದ್ರನ್. ಇವರು ಇದುವರೆಗೆ ಆಂಧ್ರಪ್ರದೇಶ ರಾಜ್ಯಪಾಲರಾಗಿದ್ದರು.
ಅನುಸೂಯ ಉಯಿಕಿ : ಮಣಿಪುರ ರಾಜ್ಯಪಾಲರನ್ನಾಗಿ ನೇಮಕ. ಇವರು ಇಲ್ಲಿಯವರೆಗೆ ಛತ್ತೀಸ್ಗಢ ರಾಜ್ಯಪಾಲರಾಗಿದ್ದರು.
ಎಲ್ ಗಣೇಶನ್: ನಾಗಲ್ಯಾಂಡ್, ಇದುವರೆಗೆ ಇವರು ಮಣಿಪುರ ರಾಜ್ಯಪಾಲರಾಗಿದ್ದರು.
ಫಗು ಚವ್ಹಾಣ್: ಮೇಘಾಲಯ ರಾಜ್ಯಪಾಲರು, ಇದುವರೆಗೆ ಬಿಹಾರ ರಾಜ್ಯಪಾಲರಾಗಿದ್ದರು.
ಬಿಹಾರ: ರಾಜೇಂದ್ರ ವಿಶ್ವನಾಥ್ ಅರ್ಲೆಕರ್, ಇವರು ಹಿಮಾಚಲಪ್ರದೇಶ ರಾಜ್ಯಪಾಲರಾಗಿದ್ದರು.
ರಮೇಶ್ ಬೈಸ್: ಮಹಾರಾಷ್ಟ್ರ ರಾಜ್ಯಪಾಲರು, ಇವರು ಜಾರ್ಖಂಡ್ ರಾಜ್ಯಪಾಲರಾಗಿದ್ದರು.
ನಿವೃತ್ತ ಬ್ರಿಗೇಡಿಯರ್ ಡಾ ಬಿ ಡಿ ಮಿಶ್ರಾ – ಲೆಫ್ಟಿನೆಂಟ್ ಗವರ್ನರ್ ಲಡಾಖ್
ADVERTISEMENT
ADVERTISEMENT