ತೆಲುಗು ನಟ ಜ್ಯೂನಿಯರ್ ಎನ್ಟಿಆರ್ ಅವರನ್ನು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರು ಭೇಟಿ ಆಗಿದ್ದಾರೆ.
ಶಾ ಅವರು ಒಂದು ದಿನದ ಮಟ್ಟಿಗೆ ತೆಲಂಗಾಣಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಜ್ಯೂನಿಯರ್ ಎನ್ಟಿಆರ್ ಅವರನ್ನು ಭೇಟಿ ಆದರು. ಭೇಟಿ ಬಗ್ಗೆ ಟ್ವೀಟಿಸಿರುವ ಶಾ ಜ್ಯೂನಿಯರ್ ಎನ್ಟಿಆರ್ ಅವರು ತೆಲುಗು ಸಿನಿಮಾದ ರತ್ನ ಎಂದು ಬಣ್ಣಿಸಿದ್ದಾರೆ.
ಪ್ರತಿಭಾನ್ವಿತ ನಟ ಮತ್ತು ತೆಲುಗು ಸಿನಿಮಾದ ರತ್ನ ಜ್ಯೂನಿಯರ್ ಎನ್ಟಿಆರ್ ಅವರನ್ನು ಇವತ್ತು ಹೈದ್ರಾಬಾದ್ನಲ್ಲಿ ಭೇಟಿ ಆಗಿ ಸಮಾಲೋಚಿಸಿದೆ
ಎಂದು ಶಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂಗ್ಲೀಷ್ ಮತ್ತು ತೆಲುಗು ಭಾಷೆಯಲ್ಲಿ ಬರೆದುಕೊಂಡಿದ್ದಾರೆ.
ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಶತಪ್ರಯತ್ನಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಜ್ಯೂನಿಯರ್ ಎನ್ಟಿಆರ್ ಅವರ ಜೊತೆಗೆ ಶಾ ಭೇಟಿ ಮಹತ್ವ ಪಡೆದಿದೆ.
ADVERTISEMENT
ADVERTISEMENT