Johnson and Johnson : ಪ್ರಸಿದ್ಧ ಮಕ್ಕಳ ಟಾಲ್ಕಮ್ ಪೌಡರ್ ಮಾರಾಟ ಬಂದ್

Johnson And Johnson

ಜಾನ್ಸನ್ ಆ್ಯಂಡ್ ಜಾನ್ಸನ್ (Johnson And Johnson) ಕಂಪೆನಿ 2023 ರಿಂದ ತಾನು ಮಾರಾಟ ಮಾಡುತ್ತಿದ್ದ ಮಕ್ಕಳ ಪೌಡರ್​ ನ ಉತ್ಪಾದನೆಯನ್ನು ಜಾಗತಿಕವಾಗಿ ನಿಲ್ಲಿಸಿದೆ.

ಹಲವು ಕಾನೂನು ಪ್ರಕರಣಗಳನ್ನು ಮತ್ತು ಕೆನಡಾ ಹಾಗೂ ಅಮೇರಿಕಾದಲ್ಲಿ ನಿಷೇಧಕ್ಕೊಳಗಾದ ನಂತರ ಜಾನ್ಸನ್ ಆ್ಯಂಡ್ ಜಾನ್ಸನ್ (Johnson And Johnson) ಕಂಪೆನಿ ಈ ನಿರ್ಧಾರ ತೆಗೆದುಕೊಂಡಿದೆ.

ಗುರುವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿ, ವ್ಯಾವಹಾರಿಕ ಕಾರಣದಿಂದಾಗಿ ಮಕ್ಕಳ ಟಾಲ್ಕಮ್ ಪೌಡರ್ ಉತ್ಪದಾನೆ ಹಾಗೂ ಮಾರಾಟವನ್ನು ವಿಶ್ವದಾದ್ಯಂತ ನಿಲ್ಲಿಸುತ್ತಿದ್ದೇವೆ. ಮಕ್ಕಳ ಟಾಲ್ಕಮ್ ಪೌಡರ್ ಚರ್ಮದ ಕ್ಯಾನ್ಸರ್​​ಗೆ ಕಾರಣವಾಗುತ್ತದೆ ಎಂದು ಹಲವು ಕಾನೂನು ಪ್ರಕರಣಗಳನ್ನು ಎದುರಿಸುತ್ತಿದೆ. ಆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ : GST: ಮನೆ ಬಾಡಿಗೆಗೂ ಜಿಎಸ್​​ಟಿ..! 

ನಂತರ ಮೇ 2020 ರಲ್ಲಿ ಸಾವಿರಾರು ಕಾನೂನು ಪ್ರಕರಣಗಳನ್ನು ಎದುರಿಸಿದ್ದ ಕಂಪೆನಿ ಕೆನಡಾ ಮತ್ತು ಅಮೇರಿಕಾದಲ್ಲಿ ತನ್ನ ಮಾರಾಟವನ್ನು ಸ್ಥಗಿತಗೊಳಿಸಿತ್ತು.

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಮಕ್ಕಳ ಟಾಲ್ಕಮ್ ಪೌಡರ್ ಜಾಗತಿಕವಾಗಿ ಹೆಚ್ಚಿನ ಪ್ರಸಿದ್ದಿ ಪಡೆದಿತ್ತು. ಜಾಗತಿಕ ಮಾರುಕಟ್ಟೆಯಲ್ಲಿಯೂ ಈ ಪೌಡರ್ ಉತ್ತನ್ನ ಹಲವು ದಶಕಗಳಿಂದ ತನ್ನ ಪಾರಮ್ಯ ಮೆರೆದಿದೆ. ಈ ಪೌಡರ್ ಬಳಕೆಯಿಂದ ಮಕ್ಕಳಲ್ಲಿ ಕ್ಯಾನ್ಸರ್​​ ಹರಡುತ್ತಿದೆ ಎಂದು ಕಳೆದ ದಶಕದಲ್ಲಿ ವಿಶ್ವದ ಹಲವೆಡೆಗಳಲ್ಲಿ ಪ್ರಕರಣ ದಾಖಲಿಸಲಾಗಿತ್ತು.

(ನಟ ಗಣೇಶ್, ದಿಗಂತ್, ಪವನ್​ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)

LEAVE A REPLY

Please enter your comment!
Please enter your name here