ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಗ್ರಾಹಕರಿಗೆ ತಿಂಗಳಿಗೆ 100 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವ ಪ್ರಸ್ತಾಪವನ್ನು ಜಾರ್ಖಂಡ್ ಸಚಿವ ಸಂಪುಟ ಅಂಗೀಕರಿಸಿದೆ.
ಒಟ್ಟು 55 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಸಂಪುಟ ಕೈಗೊಂಡಿದೆ.
ತಮ್ಮ ಸರ್ಕಾರವು ಹೇಳಿದಂತೆ ರಾಜ್ಯದ ಜನರಿಗೆ ಮಾಡಿದ ಭರವಸೆಯನ್ನು ಪೂರೈಸುತ್ತಿದೆ. ಜುಲೈ 1 ರಿಂದ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಎಎಪಿ ಸರ್ಕಾರ ಈ ಹಿಂದೆ ಘೋಷಿಸಿತ್ತು. ಅದರಂತೆ ಈಗ ಜಾರ್ಖಂಡ್ ಸರ್ಕಾರವೂ ಬಡವರಿಗೆ 100 ಯುನಿಟ್ ಉಚಿತ ವಿದ್ಯುತ್ ನೀಡಲು ಮುಂದಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (ನರೇಗಾ) ಅಡಿಯಲ್ಲಿ ಸೇರ್ಪಡೆಗೊಂಡ ಕಾರ್ಮಿಕರಿಗೆ ರಾಜ್ಯ ಸರ್ಕಾರವು 27 ರೂ ಹೆಚ್ಚುವರಿ ಮೊತ್ತವನ್ನು ನೀಡುತ್ತದೆ. ನರೇಗಾ ಅಡಿಯಲ್ಲಿ ನೋಂದಾಯಿಸಲಾದ ಕಾರ್ಮಿಕರ ಕನಿಷ್ಠ ಕೂಲಿಯನ್ನು ರೂ 237ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಸರ್ಕಾರ ಇದೇ ವೇಳೆ ಹೇಳಿದೆ.