ಡಿಕೆಶಿ ವಿರುದ್ಧ ಕನಕಪುರದಲ್ಲಿ ಯಾರು ಜೆಡಿಎಸ್​ ಎದುರಾಳಿ..?

KPCC President D K Shivakumar and Ex Chief Minister H D Kumarswamy
KPCC President D K Shivakumar and Ex Chief Minister H D Kumarswamy
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ ಅವರ ನೇರ ಸಂಘರ್ಷಕ್ಕೆ ಕಾರಣವಾಗಿರುವ ರಾಮನಗರ ಜಿಲ್ಲೆಯಲ್ಲಿ 3 ಕ್ಷೇತ್ರಗಳಿಗೆ ಜೆಡಿಎಸ್​ ಅಭ್ಯರ್ಥಿಗಳನ್ನು ಘೋಷಿಸಿದೆ.
ಆದರೆ ಡಿಕೆಶಿವಕುಮಾರ್​ ಅವರು ಪ್ರತಿನಿಧಿಸುವ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕುಮಾರಸ್ವಾಮಿ ಅವರು ಅಭ್ಯರ್ಥಿಯನ್ನು ಪ್ರಕಟಿಸಿಲ್ಲ.
ಚನ್ನಪಟ್ಟಣದಿಂದ ಈ ಬಾರಿ ಮತ್ತೆ ಕುಮಾರಸ್ವಾಮಿ ಅವರೇ ಜೆಡಿಎಸ್​ನಿಂದ ಸ್ಪರ್ಧಿಸ್ತಿದ್ದಾರೆ.
ರಾಮನಗರ ಕ್ಷೇತ್ರವನ್ನು ಅನಿತಾ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ.
ಮಾಗಡಿ ಕ್ಷೇತ್ರದ ಹಾಲಿ ಶಾಸಕ ಮಂಜುನಾಥ್​ ಅವರಿಗೆ ಜೆಡಿಎಸ್​ ಮತ್ತೆ ಟಿಕೆಟ್​ ನೀಡಿದೆ.
ಕನಕಪುರಕ್ಕೆ ಡಿಕೆಶಿ ವಿರುದ್ಧ ಮುಂದಿನ ದಿನಗಳಲ್ಲಿ ಜೆಡಿಎಸ್​ ತನ್ನ ಅಭ್ಯರ್ಥಿ ಘೋಷಿಸುವ ನಿರೀಕ್ಷೆ ಇದೆ.