ತೃತೀಯ ರಂಗದ ಪ್ರಭಾವಿ ಭಾಗ ಆಗಲು ಹೊರಟಿರುವ ಜೆಡಿಎಸ್ ರಾಷ್ಟç ರಾಜಕಾರಣದಲ್ಲಿ ಭಾರೀ ಮುಖಭಂಗವಾಗಿದೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಸೋಲುವುದು ಪಕ್ಕಾ ಆಗಿದೆ.
ಈ ಸೋಲಿನೊಂದಿಗೆ ಕರ್ನಾಟಕದಿಂದ ರಾಜ್ಯಸಭೆಯಲ್ಲಿ ಜೆಡಿಎಸ್ ಒಂದು ಸ್ಥಾನ ಕಳೆದುಕೊಳ್ಳಲಿದೆ. ಒಂದು ಸ್ಥಾನ ಕಳೆದುಕೊಳ್ಳುವುದರೊಂದಿಗೆ ರಾಜ್ಯಸಭೆಯಲ್ಲಿ ಜೆಡಿಎಸ್ ಬಲಾಬಲ ಒಂದಕ್ಕೆ ಕುಸಿಯಲಿದೆ.
ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಷ್ಟೇ ಜೆಡಿಎಸ್ನ್ನು ಪ್ರತಿನಿಧಿಸಲಿದ್ದಾರೆ. 2020ರಲ್ಲಿ ದೇವೇಗೌಡರು ಅವಿರೋಧವಾಗಿ ಆಯ್ಕೆ ಆಗಿದ್ದರು.
ಲೋಕಸಭೆಯಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿದ್ದಾರೆ. ಅಂದರೆ ಮೇಲ್ಮನೆಯಲ್ಲಿ ತಾತ ದೇವೇಗೌಡರು ಜೆಡಿಎಸ್ನ್ನು ಪ್ರತಿನಿಧಿಸಿದರೆ, ಕೆಳಮನೆಯಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣರಷ್ಟೇ ಈಗ ಜೆಡಿಎಸ್ ಸಂಸದರಾಗಿ ಉಳಿಯಲಿದ್ದಾರೆ.