ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ನಡುವೆಯೇ ಈಗ ಜೆಡಿಎಸ್ನ ಮತ್ತೊಂದು ವಿಕೆಟ್ ಪತನ ಆಗಿದೆ. ಜೆಡಿಎಸ್ ಎಂಎಲ್ಸಿ ಮರಿತಿಬ್ಬೇಗೌಡ ಅವರು ತಾವು ಜೆಡಿಎಸ್ ಪಕ್ಷವನ್ನು ಬಿಡುವುದಾಗಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಘೋಷಿಸಿದ್ದಾರೆ.
ಪದವೀಧರ ಕ್ಷೇತ್ರದಿಂದ ಈ ಬಾರಿ ಜೆಡಿಎಸ್ ಪಕ್ಷ ಹೆಚ್ ಕೆ ರಾಮು ಎಂಬವರಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಬಲಿಗರ ಸಭೆ ನಡೆಸಿದ ಮರಿತಿಬ್ಬೇಗೌಡ `ಜೆಡಿಎಸ್ ಅಭ್ಯರ್ಥಿಗೆ ಮತಹಾಕದಂತೆ ಬೆಂಬಲಿಗರು, ಕ್ಷೇತ್ರದ ಮತದಾರರು ಮನವಿ ಮಾಡಿದ್ದಾಗಿ’ ಹೇಳಿದ್ದಾರೆ.
`ಪಕ್ಷದಲ್ಲಿ ನನ್ನ ಅವಧಿ ಇರುವವರೆಗೆ ನಾನು ಇರ್ತಿನಿ. ಆದ್ರೆ ಪಕ್ಷದ ನಾಯಕರು ತೆಗೆದುಕೊಂಡಿರುವ ಕೆಟ್ಟ ನಿರ್ಧಾರಕ್ಕೆ ನನ್ನ ಬೆಂಬಲವಿಲ್ಲ. ನಾನು ಜೆಡಿಎಸ್ ಅಭ್ಯರ್ಥಿಗೆ ಮತ ಕೇಳಲ್ಲ. ಹಣ ಇಲ್ಲದವ್ರಿಗೆ ಜೆಡಿಎಸ್ ನಾಯಕರು ಟಿಕೆಟ್ ಕೊಡಲ್ಲ.’
`ಜಯರಾಂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಎಂದು ಹೇಳಿದರೂ ಅವರ ಬಳಿ ದುಡ್ಡು ಇರದ ಕಾರಣ ಟಿಕೆಟ್ ಕೊಡಲಿಲ್ಲ. ಹಾಗಾದ್ರೆ ಹೆಚ್ ಕೆ ರಾಮು ಬಳಿ ಎಷ್ಟು ಕೋಟಿ ಇದೆ..? ಹಣ ಇದ್ದವರಿಗೆ ಟಿಕೆಟ್ ಕೊಟ್ಟಿದ್ದಾರೆ’
`ಪಕ್ಷದ ಕೆಲಸ ಮಾಡಲಿಲ್ಲ ಮತ್ತು ಅವರು ಯಾರೆಂದು ಗೊತ್ತೇ ಇಲ್ಲ ಎಂದು ಆರಂಭದಲ್ಲಿ ಹೇಳಿದ್ದ ನಾಯಕರು ಅವರಿಗೇ ಟಿಕೆಟ್ ಕೊಟ್ಟರು ಎಂದರೆ ಯಾತಕ್ಕೆ ಕೊಟ್ರು..?. ಪಕ್ಷದ ಪ್ರಾಥಮಿಕ ಸದಸ್ಯತ್ವ ಇಲ್ಲದ, ಪಕ್ಷದ ಕೆಲಸ ಮಾಡದವರಿಗೆ ಟಿಕೆಟ್ ಕೊಟ್ಟಿದ್ದೀರಿ. ಇದ್ಯಾವ ಮಾನದಂಡ..?’
ಎAದು ಹೆಚ್ ಕೆ ರಾಮುಗೆ ಟಿಕೆಟ್ ಕೊಟ್ಟಿದ್ದಕ್ಕೆ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.