BIG BREAKING: ಕರ್ನಾಟಕದಲ್ಲಿ ಎರಡು ಹೋಳಾಗಲಿದ್ಯಾ JDS..? ಹೆಚ್​ಡಿಕೆ BJPಯತ್ತ..? ಅತೃಪ್ತರು ಕಾಂಗ್ರೆಸ್​ಗೆ..?

ಕರ್ನಾಟಕದಲ್ಲಿ ಯಾರು ಅಜಿತ್​ ಪವಾರ್​ ಯಾರು ಎಂದು ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಪ್ರಶ್ನಿಸಿದ್ದರು. ಆದರೆ ಜೆಡಿಎಸ್​ನಲ್ಲಾಗುತ್ತಿರುವ ಕೆಲ ಬೆಳವಣಿಗೆಳು ರಾಜ್ಯದಲ್ಲಿ ಜೆಡಿಎಸ್​ ಎರಡು ಹೋಳಾಗಬಹುದು ಎಂಬ ಸುಳಿವು ನೀಡುತ್ತಿದೆ.

ಮೂಲಗಳ ಜೆಡಿಎಸ್​ನ 12ಕ್ಕೂ ಅಧಿಕ ಶಾಸಕರು ಪಕ್ಷ ಬಿಟ್ಟು ಕಾಂಗ್ರೆಸ್​ನತ್ತ ಬರಲು ಮನಸ್ಸು ಮಾಡುತ್ತಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಗೆ ಮೊದಲೇ ಜೆಡಿಎಸ್​ ರಾಜ್ಯದಲ್ಲಿ ಹೋಳಾದರೂ ಅಚ್ಚರಿಯೇನಿಲ್ಲ.

ಕುಮಾರಸ್ವಾಮಿ ನಡೆಗೆ ಅಸಮಾಧಾನ:

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ತುದಿಗಾಲಲ್ಲಿ ನಿಂತಿರುವ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ನಡೆಗೆ ಜೆಡಿಎಸ್​ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹಳೆ ಮೈಸೂರು ಭಾಗದ ಹಿರಿಯ ಶಾಸಕರೂ ಸೇರಿದಂತೆ ಜೆಡಿಎಸ್​ನ ದೊಡ್ಡ ಗುಂಪನ್ನೇ ಸೆಳೆಯಲು ಕಾಂಗ್ರೆಸ್​ ರಣತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಮತ್ತು ಪುತ್ರ ನಿಖಿಲ್​ ಕುಮಾರಸ್ವಾಮಿ ರಾಜಕೀಯ ಭದ್ರತೆಗಾಗಿಯೇ ಬಿಜೆಪಿ ಜೊತೆ ಹೋಗಲು ಸಿದ್ಧರಾಗಿರುವ ಹೆಚ್​​ಡಿಕೆ ನಡೆ ಉಳಿದ ಶಾಸಕರ ಸಿಟ್ಟಿಗೆ ಕಾರಣವಾಗಿದೆ.

ಒಂದು ವೇಳೆ ಬಿಜೆಪಿ ಜೊತೆಗೆ ಹೋದರೆ ಪ್ರಧಾನಿ ಮೋದಿ ಸರ್ಕಾರದಲ್ಲಿ ಸಚಿವರಾಗುವ ಲೆಕ್ಕಾಚಾರ ಕುಮಾರಸ್ವಾಮಿ ಅವರದ್ದು. ಆಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸಹಕಾರದೊಂದಿಗೆ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರನ್ನು ಶಾಸಕರನ್ನಾಗಿ ಕಾಣುವ ಲೆಕ್ಕಾಚಾರದಲ್ಲಿ ಹೆಚ್​ಡಿಕೆ ಇದ್ದಾರೆ. 

ಮೈತ್ರಿಯ ಬಗ್ಗೆ ಸ್ವತಃ ಹೆಚ್​ಡಿಕೆ ಅವರೇ ಬಿಜೆಪಿ ನಾಯಕರ ಮುಂದೆ ಪ್ರಸ್ತಾಪ ಇಟ್ಟಿದ್ದರು.

ಪಕ್ಷಾಂತರ ನಿಯಮದಿಂದ ಪಾರು:

ಪಕ್ಷಾಂತರ ನಿಯಮಗಳ ಪ್ರಕಾರ ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ಶಾಸಕರು ಪಕ್ಷದಿಂದ ಹೊರಬಂದು ಇನ್ನೊಂದು ಪಕ್ಷದೊಳಗೆ ಸೇರಿದತೆ ಆಗ ಪಕ್ಷಾಂತರ ನಿಷೇಧ ಅನ್ವಯವಾಗಲ್ಲ. 

ಹೀಗಾಗಿ 19 ಶಾಸಕರನ್ನು ಹೊಂದಿರುವ ಜೆಡಿಎಸ್​ನಿಂದ 13 ಶಾಸಕರು ಹೊರಬಂದು ಕಾಂಗ್ರೆಸ್​​ಗೆ ಸೇರಿದರೆ ಆಗ ಪಕ್ಷಾಂತರ ನಿಷೇಧ ನಿಯಮ ಅನ್ವಯಿಸಲ್ಲ ಮತ್ತು ಉಪ ಚುನಾವಣೆ ಎದುರಿಸುವ ಅಗತ್ಯವೇನಿಲ್ಲ. 

ಇದೇ ಸೂತ್ರವನ್ನು ಮಹಾರಾಷ್ಟ್ರದಲ್ಲಿ ಎನ್​ಸಿಪಿ ಮತ್ತು ಶಿವಸೇನೆ ವಿಭಜನೆಗೆ ಬಿಜೆಪಿ ಬಳಸಿದೆ. ಆದರೆ ಎನ್​ಸಿಪಿ ಮತ್ತು ಶಿವಸೇನೆ ಬಂಡಾಯ ಬಣ ಸರ್ಕಾರದಲ್ಲಷ್ಟೇ ಭಾಗಿಯಾಗಿದೆ, ಬಿಜೆಪಿಯಲ್ಲಿ ವಿಲೀನವಾಗಿಲ್ಲ.

ರೇವಣ್ಣ ನಡೆ ಏನು..?

ಸಿದ್ದರಾಮಯ್ಯ ಅವರ ವಿರುದ್ಧ ನಾನು ಭ್ರಷ್ಟಾಚಾರದ ಆರೋಪ ಮಾಡಲ್ಲ, ಸಿದ್ದರಾಮಯ್ಯ ವರ್ಗಾವಣೆ ದಂಧೆ ಮಾಡುವವರಲ್ಲ ಎಂದು ತಮ್ಮ ಸಹೋದರ ಕುಮಾರಸ್ವಾಮಿ ಅವರ ಎದುರೇ ವಿಧಾನಸಭೆಯಲ್ಲಿ ಹೆಚ್​ ಡಿ ರೇವಣ್ಣ ಹೇಳಿದ್ದರು.

ಹೀಗಾಗಿ ಒಂದು ವೇಳೆ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಕೈ ಜೋಡಿಸಿದರೆ ರೇವಣ್ಣ ಅವರ ಬೆಂಬಲ ಇರುತ್ತಾ ಎನ್ನುವುದೇ ಪ್ರಶ್ನೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಪುತ್ರ ಪ್ರಜ್ವಲ್​ ರೇವಣ್ಣ ಗೆಲ್ಲಲು ಸಿದ್ದರಾಮಯ್ಯ ಅವರ ಆರ್ಶೀವಾದವೇ ಪ್ರಮುಖ ಕಾರಣವಾಗಿತ್ತು. ಜೊತೆಗೆ ಈ ಬಾರಿ ಹೊಳೆನರಸೀಪುರದಲ್ಲಿ ಕೂದಲೆಳೆ ಅಂತರದಲ್ಲಿ ರೇವಣ್ಣ ಗೆಲುವಿಗೆ ಸಿದ್ದರಾಮಯ್ಯ ಪ್ರಚಾರ ಮಾಡದಿರುವುದೂ ಕಾರಣ. 

ಈ ಹಿನ್ನೆಲೆಯಲ್ಲಿ ರೇವಣ್ಣ ಅವರು ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಜೊತೆಯಾಗುತ್ತಾರಾ ಅಥವಾ ತಮ್ಮ ದೀರ್ಘಕಾಲದ ಸ್ನೇಹಿತ ಸಿಎಂ ಸಿದ್ದರಾಮಯ್ಯ ಅವರ ಜೊತೆಗಿರುತ್ತಾರಾ ಎನ್ನುವುದೇ ಕುತೂಹಲ.

LEAVE A REPLY

Please enter your comment!
Please enter your name here