Jammu Kashmir : ನದಿಗೆ ಉರುಳಿದ 39 ಸೈನಿಕರಿದ್ದ ಬಸ್​ – 6 ಸೈನಿಕರು ಹುತಾತ್ಮ

Jammu Kahsmir : bus falls in to river
Jammu Kahsmir : bus falls in to river

ಸೈನಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್​ ಜಮ್ಮು-ಕಾಶ್ಮೀರದಲ್ಲಿ (Jammu & Kashmir) ನದಿಗೆ ಉರುಳಿಬಿದ್ದಿದೆ. ದುರಂತದಲ್ಲಿ 6 ಸೈನಿಕರು ಹುತಾತ್ಮರಾಗಿದ್ದಾರೆ.

ಈ ಬಸ್​ನಲ್ಲಿ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​ (ITBP)ಗೆ ಸೇರಿದ 37 ಸೈನಿಕರು ಮತ್ತು ಇಬ್ಬರು ಜಮ್ಮು-ಕಾಶ್ಮೀರ ಪೊಲೀಸರು ಇದ್ದರು.

ಇದನ್ನೂ ಓದಿ :  Chanakya Neeti – ಸುಖ ಸಂಸಾರಕ್ಕೆ ನವ ಸೂತ್ರಗಳು

ಈ ಬಸ್​ನಲ್ಲಿ ಸೈನಿಕರು ಚಂದವಾರಿಯಿಂದ ಪಾಹಲ್ಗಾಮ್​ಗೆ ತೆರಳುತ್ತಿದ್ದರು.

ಈ ವೇಳೆ ಬ್ರೇಕ್​ ಫೇಲ್​ ಆದ ಕಾರಣ ಬಸ್​ ನದಿಗೆ ಉರುಳಿಬಿದ್ದಿದೆ.

ಅನಂತ್​​ನಾಗ್​ ಜಿಲ್ಲೆಯ ಚಂದವಾರಿಯಲ್ಲಿ ನಡೆದಿರುವ ಈ ದುರಂತದಲ್ಲಿ ಗಾಯಗೊಂಡಿರುವ ಉಳಿದ ಸೈನಿಕರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ಏರ್​ಲಿಫ್ಟ್​ (AirLift) ಮಾಡಲಾಗಿದೆ.

LEAVE A REPLY

Please enter your comment!
Please enter your name here