Jammu And Kashmir Police Recruitment Scam : ಬೆಂಗಳೂರು ಸೇರಿ 36 ಕಡೆ ಸಿಬಿಐ ದಾಳಿ

Jammu And Kashmir Police Recruitment Scam

ಜಮ್ಮು ಮತ್ತು ಕಾಶ್ಮೀರದ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣಕ್ಕೆ (Jammu And Kashmir Police Recruitment Scam)  ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಮಂಗಳವಾರ ಬೆಂಗಳೂರಿನ ಕೆಲವು ಸ್ಥಳಗಳನ್ನು ಸೇರಿದಂತೆ 36 ಕಡೆಗಳಲ್ಲಿ ಶೋಧ ನಡೆಸಿದೆ.

ಇನ್‌ಸ್ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಮ್ಮು, ಶ್ರೀನಗರ, ಕರ್ನಾಲ್, ಮಹೇಂದರ್‌ಗಢ, ಹರಿಯಾಣದ ರೇವಾರಿ, ಗುಜರಾತ್‌ನ ಗಾಂಧಿನಗರ, ಉತ್ತರ ಪ್ರದೇಶದ ಗಾಜಿಯಾಬಾದ್, ಕರ್ನಾಟಕದ ಬೆಂಗಳೂರು ಮತ್ತು ದೆಹಲಿ ಸೇರಿದಂತೆ ದೇಶದಾದ್ಯಂತ ಸುಮಾರು 36 ಸ್ಥಳಗಳಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ.

ಪರಿಶೀಲನೆ ವೇಳೆ ಕೆಲವು ತಿದ್ದುಪಡಿ ಮಾಡಿದ ದಾಖಲೆಗಳು, ಡಿಜಿಟಲ್ ಪುರಾವೆಗಳು ದೊರೆತಿವೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಬಿಐ ತನಿಖೆಯ ಸಂದರ್ಭದಲ್ಲಿ, ಮಾರ್ಚ್ 27, 2022 ರಂದು ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳಲ್ಲಿ ಬೆಂಗಳೂರಿನ ಕೋಚಿಂಗ್ ಸೆಂಟರ್‌ನ ಮಾಲೀಕ ಸೇರಿದಂತೆ ಕೆಲವು ವ್ಯಕ್ತಿಗಳು ಭಾಗಿಯಾಗಿರುವುದು ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೂ ಸಿಬಿಐ ದಾಳಿ ನಡೆಸಿದೆ.

ಜೂನ್ 4, 2022 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗಿತ್ತು. ಅನಂತರ ಜಮ್ಮು, ರಜೌರಿ ಮತ್ತು ಸಾಂಬಾ ಜಿಲ್ಲೆಗಳಿಂದ ಅಸಹಜವಾಗಿ ಹೆಚ್ಚಿನ ಶೇಕಡಾವಾರು ಆಯ್ಕೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ, ತನಿಖೆ ನಡೆಸಲು (Jammu And Kashmir Police Recruitment Scam)  ಜಮ್ಮು ಮತ್ತು ಕಾಶ್ಮೀರ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿತ್ತು. ಇದನ್ನೂ ಓದಿ : PSI ಹಗರಣ – ಹಣ ಕೊಟ್ಟ ವ್ಯಕ್ತಿಗೆ ಶಾಸಕ ದಡೇಸೂಗೂರು ಧಮ್ಕಿ!

LEAVE A REPLY

Please enter your comment!
Please enter your name here