Jammu And Kashmir : ಕಾರು ಕಂದಕಕ್ಕೆ ಉರುಳಿ 8 ಜನ ಸಾವು

ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಿಶ್ತ್‌ವಾರ್ ಜಿಲ್ಲೆಯಲ್ಲಿ ರಸ್ತೆಯಿಂದ ಸ್ಕಿಡ್ ಆದ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಬಾಲಕಿ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಕಿಶ್ತ್‌ವಾರ್ ಉಪ ಆಯುಕ್ತ (ಡಿಸಿ) ದೇವಾಂಶ್ ಯಾದವ್ ತಿಳಿಸಿದ್ದಾರೆ.

ಜಮ್ಮುವಿನ (Jammu And Kashmir) ಕಿಶ್ತ್‌ವಾರ್ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ : Accident – ಭೀಕರ ಅಪಘಾತದಲ್ಲಿ 9 ಮಂದಿ ದುರ್ಮರಣ

ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಕಚೇರಿ ಟ್ವೀಟ್ ತಿಳಿಸಿದೆ.

ಕಾರು ಚಿಂಗಮ್‌ನಿಂದ ಚತ್ರೂಗೆ ಸಂಚರಿಸುತ್ತಿತ್ತು. ಬುಂದಾ ಗ್ರಾಮದ ಬಳಿಕ ಅಪಘಾತ ಸಂಭವಿಸಿದ್ದು, ರಸ್ತೆಯಿಂದ ಸ್ಕಿಡ್ ಆದ ಕಾರು ಸುಮಾರು 300 ಅಡಿ ಆಳದ ಕಂದಕಕ್ಕೆ ಬಿದ್ದಿದೆ.

ಇದನ್ನೂ ಓದಿ : ಯಾತ್ರಾರ್ಥಿಗಳಿದ್ದ ವಾಹನ ಭೀಕರ ಅಪಘಾತ – 6 ಜನ ಸಾವು

LEAVE A REPLY

Please enter your comment!
Please enter your name here